ರಾಯಚೂರು: ಬಿಜೆಪಿಯವರಿಗೆ (BJP) ಅಭಿವೃದ್ಧಿ ಕೆಲಸ ಬೇಕಿಲ್ಲ, ಬಿಜೆಪಿ ವಕ್ಫ್ (Waqf) ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಅವರ ಶಿಷ್ಯಂದಿರಿಗೆ ಅಭಿವೃದ್ದಿ ಬೇಕಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು (NS Boseraju) ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ (Raichuru) ಜಿಲ್ಲಾ ವಕ್ಫ್ ಸಲಹಾ ಸಮಿತಿ ನೂತನ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾಳೆಯಿಂದ ರಾಜ್ಯದಲ್ಲಿ ಕೇಂದ್ರದ ಜಂಟಿ ಸಂಸದೀಯ ಸಮಿತಿಯಿಂದ ವಕ್ಫ್ ಬಗ್ಗೆ ಮಾಹಿತಿ ಸಂಗ್ರಹ ವಿಚಾರವಾಗಿ, ಓರ್ವ ಪ್ರಧಾನಿ ಸಣ್ಣ ಸಣ್ಣ ವಿಷಯಕ್ಕೆ ನೀತಿ ನಿಯಮ ಇಲ್ಲದೇ ಹುದ್ದೆಗೆ ಗೌರವ ಇಲ್ಲದ ರೀತಿ ರಾಜಕೀಯಕ್ಕಾಗಿ ಮಾಡ್ತಿದ್ದಾರೆ. ಅವರಿಂದ ನಾವು ಕಲಿಯಬೇಕಿರುವುದು ಏನೂ ಇಲ್ಲ ಎಂದರು.ಇದನ್ನೂ ಓದಿ: ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ
ಮೋದಿಯವರ ಶಿಷ್ಯರೆಲ್ಲಾ ಇದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರಿದ್ದಾರೆ? ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ. ಅದನ್ನ ನಾವು ಹೇಳುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರಾಗಿಯೇ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಾವೇನು ಮಾತನಾಡುವುದು? ಇದೆಲ್ಲಾ ಜನರಿಗೆ ಗೊತ್ತಾಗಿದೆ. ಬಿಜೆಪಿಯವರ ಕಥೆ ಮುಗಿದು ಹೋಗುತ್ತದೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಒಂದು ಸಮುದಾಯಕ್ಕೆ ಸೇರಿರೋದು. ವಕ್ಫ್ ಬೋರ್ಡ್ ಆಸ್ತಿ ಎಂದು ಕ್ಲೇಮ್ ಮಾಡಿರಬಹುದು. ರೆಕಾರ್ಡ್ ನೋಡಿಕೊಂಡು ಸರಿಪಡಿಸುತ್ತೇವೆ. ಬೊಮ್ಮಾಯಿ ಸಿಎಂ ಆಗಿದ್ದಾಗ 216 ಕಡೆ ಈ ರೀತಿ ನೋಟಿಸ್ ಕೊಟ್ಟಿದ್ದರು. ಬೊಮ್ಮಾಯಿಯವರು ವಕ್ಫ್ ಸಭೆಯಲ್ಲಿ ವಕ್ಫ್ ಆಸ್ತಿ ಕಬಳಿಕೆ ಆಗಿದೆ ಅದನ್ನು ಖಾಲಿ ಮಾಡಬೇಕು ಎಂದು ಹೇಳಿದ್ದರು. 216 ಕಡೆ ನೋಟಿಸ್ ಕೊಟ್ಟಿರುವ ರೆಕಾರ್ಡ್ ನಮ್ಮ ಬಳಿ ಇದೆ. ಹೀಗಿದ್ದರೂ ನಮ್ಮ ಮೇಲೆ ಆಪಾದನೆ ಮಾಡುತ್ತಾರೆ. ಅಂದರೆ ಬಿಜೆಪಿ ಅವರಿಗೆ ಕಣ್ಣು, ಕಿವಿ ಹಾಗೂ ಬಾಯಿನೂ ಇಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ