ಸ್ಥಳ ಮಹಜರ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಬಂಧನ

Public TV
1 Min Read
Madikeri Murder kodagu

ಮಡಿಕೇರಿ: ಸ್ಥಳ ಮಹಜರ್‌ ವೇಳೆ ಪೊಲೀಸರಿಂದ (Kodagu Police) ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈದರಾಬಾದ್‌ನ ಉಪ್ಪಳ್ (Hyderabad Uppal) ಎಂಬಲ್ಲಿ ಮಹಜರ್‌ ಪ್ರಕ್ರಿಯೆ ವೇಳೆ ಪರಾರಿಯಾಗಿದ್ದ ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾನನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತಂದುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್

ಇತ್ತೀಚೆಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪನ್ಯ ಎಸ್ಟೇಟ್ ಎಂಬಲ್ಲಿ ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿ ಪುರುಷನ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪರಾಧ ಪ್ರಕರಣ ಬೇಧಿಸಿ ಆರೋಪಿಗಳಾದ ಮೃತ ವ್ಯಕ್ತಿಯ ಪತ್ನಿ ನಿಹಾರಿಕಾ ಸೇರಿದಂತೆ ಆಕೆಯ ಗೆಳೆಯರಾದ ಆಂಧ್ರಪ್ರದೇಶದ ಕಡಪ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ನಿಖಿಲ್ ಮೈರೆಡ್ಡಿ ಹಾಗೂ ಅಂಕುರ್ ರಾಣಾನನ್ನು ಬಂಧಿಸಿದ್ದರು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್‌ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು

ಬಂಧಿತರ ಪೈಕಿ ಅಂಕುರ್ ರಾಣಾನನ್ನು ಕೊಲೆ ಕೃತ್ಯ ನಡೆದಿದ್ದ ಸ್ಥಳದ ಮಹಜರಿಗೆಂದು 13 ಮಂದಿ ಪೊಲೀಸರು, ಸುಂಟಿಕೊಪ್ಪ ಪಂಚಾಯಿತಿಯ ಇಬ್ಬರು ಸಿಬ್ಬಂದಿಯೊಂದಿಗೆ ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿಗೆ ಕರೆದೊಯ್ದು ಮಹಜರ್‌ ನಡೆಸಿದ ಬಳಿಕ ಅಲ್ಲಿನ ಲಾಡ್ಜ್‌ವೊಂದರಲ್ಲಿ ಅ.30ರಂದು ರಾತ್ರಿ ತಂಗಿದ್ದರು. ಅ.31ರ ಮುಂಜಾನೆ ಆರೋಪಿ ಅಂಕುರ್ ರಾಣಾ ಪೊಲೀಸ್‌ರೊಬ್ಬರ ಮೊಬೈಲ್ ಕಳವು ಮಾಡಿ ಕೈಗೆ ಹಾಕಿದ್ದ ಬೇಡಿಯನ್ನು ಕಳಚಿ ಪರಾರಿಯಾಗಿದ್ದ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಿಂದಲೂ ಪೊಲೀಸರ ವಿಶೇಷ ತನಿಖಾ ತಂಡ ಅಲ್ಲಿಗೆ ತೆರಳಿ ಅಂಕುರ್ ರಾಣಾನಿಗಾಗಿ ಹುಡುಕಾಟದಲ್ಲಿ ತೊಡಗಿತ್ತು.

Share This Article