ಕಾರವಾರ: ಗಂಡನ ಚಿತ್ರಹಿಂಸೆಯಿಂದ ನೊಂದು ಇಂದು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಮಹಿಳೆಯನ್ನು ಸ್ಥಳೀಯರ ರಕ್ಷಣೆ ಮಾಡಿದ್ದಾರೆ.
ನಗರದ ಮಾಜಾಳಿಯ ಬಾವಳಾದ ನಿವಾಸಿ ಸರಿತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕಾರವಾರ ನಗರದ ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.
- Advertisement 2-
- Advertisement 3-
ಗುರುವಾರ ಸರಿತಾ ಪತಿ ಏಕನಾಥ್ ಕೋಬ್ರೇಕರ್ ತನ್ನ ಪತ್ನಿಯ ಮೇಲೆ ಮನಸ್ಸೋ ಇಚ್ಚೇ ಥಳಿಸಿದ್ದಾನೆ. ಇಷ್ಟೇ ಅಲ್ಲದೇ ಸಿಗೆರೇಟ್‍ನಿಂದ ಕೈಯನ್ನು ಸುಟ್ಟು ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ಸರಿತಾ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರ ತೀರಕ್ಕೆ ಬಂದಿದ್ದರು.
- Advertisement 4-
ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.