‘ರಾಜ ರಾಣಿ’ (Raja Rani) ರಿಯಾಲಿಟಿ ಶೋ ಖ್ಯಾತಿಯ ಜಯಶ್ರೀ (Jayshree Aradhya) ಮತ್ತು ಸ್ಟೀವನ್ (Steven) ನಡುವೆ ಬ್ರೇಕಪ್ ಆಗಿದೆ. ಈ ಕುರಿತು ಸ್ವತಃ ಜಯಶ್ರೀ ಆರಾಧ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಇನ್ಮೇಲೆ ‘ಅಣ್ತಮ್ಮ’
ಹೌದು, ನೀವು ಕೇಳುತ್ತಿರುವ ಗಾಳಿ ಮಾತುಗಳು ಸತ್ಯ, ನನ್ನ ಬಾಯ್ಫ್ರೆಂಡ್ನಿಂದ (ಸ್ಟೀವನ್) ದೂರ ಆಗಿದ್ದೀನಿ. ಇನ್ನು ಮುಂದೆ ದಿ ಗ್ಲಾಮರ್ ರೂಮ್ಗೆ ಸಂಬಂಧಪಟ್ಟ ಮಾಹಿತಿಗೆ ನನ್ನನ್ನು ಸಂಪರ್ಕ ಮಾಡಿ. ಇಲ್ಲವಾದರೆ ‘ದಿ ಗ್ಲಾಮ್ ರೂಮ್’ ತಂಡವನ್ನು ಸಂಪರ್ಕಿಸಿ. ನಾನು ಕಟ್ಟಿರುವ ಗ್ಲಾಮ್ ರೂಮ್ ಸಂಸ್ಥೆ ಯಾವುದೇ ಪಾರ್ಟನರ್ಶಿಪ್ ಅಥವಾ ಹೂಡಿಕೆದಾರರ ಮೇಲೆ ನಡೆಯುತ್ತಿರಲಿಲ್ಲ. ಇದಕ್ಕೆ ಹಣವನ್ನು ಬ್ಯಾಂಕ್ ಲೋನ್ ಮುಖಾಂತರ ಹೊಂದಿಸಿದ್ದೆ, ಅದನ್ನು ನಾನೇ ಕಟ್ಟುತ್ತಿರುವುದು. ಹಿಂದೆ ಮತ್ತು ಮುಂದೆ ಕೂಡ ನಾನೇ ಕಟ್ಟುವುದು. ಇದುವರೆಗೂ ನೀವು ನನ್ನ ಮೇಲೆ ತೋರಿಸಿರುವ ಪ್ರೀತಿ, ಕಾಳಜಿ ಮತ್ತು ಸಹನೆಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು ಜಯಶ್ರೀ ಬರೆದುಕೊಂಡಿದ್ದಾರೆ.
View this post on Instagram
ಅಂದಹಾಗೆ, ಜಯಶ್ರೀ ಮತ್ತು ಸ್ಟೀವನ್ ಹಲವು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದರು. ಮದುವೆಯಾಗದೇ ಇರುವ ಜೋಡಿಯನ್ನು ‘ರಾಜ ರಾಣಿ’ ಶೋನಲ್ಲಿ ಆಯ್ಕೆ ಮಾಡಿದ್ದಕ್ಕೆ ನೋಡುಗರಿಂದ ವಿರೋಧ ವ್ಯಕ್ತವಾಗಿತ್ತು. ಮದುವೆಯಾಗದೇ ಇದ್ದರೂ ನಾವು ಗಂಡ ಹೆಂಡತಿನೇ ಎಂದಿದ್ದ ಈ ಜೋಡಿಯ ಬ್ರೇಕಪ್ ಸುದ್ದಿ ಕೇಳಿ, ಇದೀಗ ನೆಟ್ಟಿಗರು ನಟಿಗೆ ಟೀಕೆ ಮಾಡಿದ್ದಾರೆ.
ಇನ್ನೂ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದ ಮಾರಿಮುತ್ತು ಅವರ ಮೊಮ್ಮಗಳು ಈ ಜಯಶ್ರೀ ಆರಾಧ್ಯ. ಇವರು ಕೂಡ ‘ಪುಟ್ಟರಾಜು’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ 1’ರಲ್ಲಿ ನಟಿ ಸ್ಪರ್ಧಿಯಾಗಿದ್ದರು.