25 ಲಕ್ಷ ಮೌಲ್ಯದ ಜಲ ಜೀವನ್ ಯೋಜನೆ ಪೈಪ್‌ ಸುಟ್ಟು ಹಾಕಿದ ಕಿಡಿಗೇಡಿಗಳು

Public TV
1 Min Read
miscreants set fire to drinking water scheme pipes in chikkamagaluru

ಚಿಕ್ಕಮಗಳೂರು:‌ ಕುಡಿಯುವ ನೀರಿನ ಯೋಜನೆಗೆ ತಂದು ಹಾಕಿದ್ದ ನೀರಿನ ಪೈಪ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ತ್ರಿಪುರ ಗ್ರಾಮದಲ್ಲಿ ನಡೆದಿದೆ.

ಬೆಂಕಿಯಿಂದ 25 ಲಕ್ಷ ರೂ. ಮೌಲ್ಯದ ನೀರಿನ ಪೈಪ್‌ಗಳು ಸುಟ್ಟು ಕರಕಲಾಗಿವೆ. ಪ್ರಧಾನ ಮಂತ್ರಿಯವರ ಕನಸಿನ ಯೋಜನೆಯಾದ ಹರ್‌ ಘರ್‌ ಜಲ್‌ ಯೋಜನೆಯಡಿ ನೀರಿನ ಪೈಪ್‌ಗಳನ್ನು ತಂದು ಹಾಕಲಾಗಿತ್ತು. ನವೆಂಬರ್ 4ರ ಸೋಮವಾರದಿಂದ ಕೆಲಸ ಕೂಡ ಆರಂಭವಾಗಬೇಕಿತ್ತು. ಆದರೆ ಕಿಡಿಗೇಡಿಗಳು ಪೈಪ್‌ಗಳಿಗೆ ಬೆಂಕಿ ಹಚ್ಚಿದ್ದು, ಎಲ್ಲಾ ಪೈಪ್‌ಗಳು ಸುಟ್ಟು ಕರಕಲಾಗಿವೆ.

ಹರೀಶ್ ಎಂಬವರು ಯೋಜನೆಯ ಗುತ್ತಿಗೆ ಪಡೆದು ಪೈಪ್‌ಗಳನ್ನು ತಂದು ಹಾಕಿದ್ದರು. ಇದೀಗ 25 ಲಕ್ಷ ರೂ. ಮೌಲ್ಯದ ಪೈಪ್‌ಗಳು ಸುಟ್ಟು ಹೋಗಿದ್ದು, ಗುತ್ತಿಗೆದಾರ ಕಣ್ಣೀರಿಟ್ಟಿದ್ದಾರೆ.

ಸ್ಥಳಕ್ಕೆ ಬಣಕಲ್‌ ಪೊಲೀಸರು (Police) ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ‌

Share This Article