ಹುಟ್ಟುಹಬ್ಬಕ್ಕೂ ಮುನ್ನವೇ ಬದುಕಿನ ಆಟ ಮುಗಿಸಿದ ಗುರುಪ್ರಸಾದ್

Public TV
1 Min Read
guruprasad director 2

‘ಎದ್ದೇಳು ಮಂಜುನಾಥ’, ‘ಮಠ’ (Mata) ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಅವರ ಆತ್ಮಹತ್ಯೆ (Suicide) ಸುದ್ದಿ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಬರ್ತ್‌ಡೇಗೂ ಮುನ್ನವೇ ಗುರುಪ್ರಸಾದ್ ಡೆತ್‌ ಡೇ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

guruprasad director 3ಡೈರೆಕ್ಟರ್ ಗುರುಪ್ರಸಾದ್ ಅವರು ಮೂಲತಃ ರಾಮನಗರದವರು. ನವೆಂಬರ್ 02, 1972ರಂದು ಜನಿಸಿದ್ದರು. ಆದರೆ, ಇದೀಗ ಅವರ ಜನ್ಮದಿನಕ್ಕೆ ಮುನ್ನವೇ ಆತ್ಮಹತ್ಯೆ ಶರಣಾಗಿದ್ದಾರೆ. ಈ ಮೂಲಕ ಬದುಕಿನ ಆಟಕ್ಕೆ ಅಂತ್ಯ ಹಾಡಿದ್ದಾರೆ. ಅವರ ಆತ್ಮಹತ್ಯೆಯ ಸುದ್ದಿ ಕುಟುಂಬಕ್ಕೆ, ಆಪ್ತರಿಕೆ ಆಘಾತವುಂಟು ಮಾಡಿದೆ.

jaggesh and guruprasad 61972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ.

guruprasad 2

2009 ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೇಷಲ್’,’ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ‘ಮಠ’, ‘ಎದ್ದೇಳು ಮಂಜುನಾಥ’,’ಮೈಲಾರಿ’, ‘ಹುಡುಗರು’,’ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ ಬಾಸ್ (Bigg Boss) ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

Share This Article