ಮೋದಿಗೆ ಜನ ಮರ್ಯಾದೆ ಕೊಡ್ತಾರೆ, ಸಿಎಂ ಹೋದ್ರೆ ಸೈಟ್‌ ಕಳ್ಳ ಅಂತಾರೆ: ಛಲವಾದಿ

Public TV
2 Min Read
Chalavadi Narayanaswamy

-ನೋಟಿಸ್ ವಾಪಸ್ ಪಡೆದ್ರೆ, ವಕ್ಫ್ ಜಮೀನು ವಾಪಸ್ ಹೋಗೋದಿಲ್ಲ

ಬೆಂಗಳೂರು: ವಕ್ಫ್ ಬೋರ್ಡ್ (Waqf Board) ಏನು ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಗೊತ್ತಿಲ್ಲ. ನೋಟಿಸ್ ವಾಪಸ್ ಪಡೆದ ತಕ್ಷಣ ವಕ್ಫ್‌ನಿಂದ ಜಮೀನು ವಾಪಸ್ ಹೋಗೊದಿಲ್ಲ ಎಂದು ವಿಧಾನ ಪರಿಷತ್‍ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ನೋಟಿಸ್ ವಾಪಸ್ ಪಡೆದರೆ, ನೋಟಿಸ್ ಮಾತ್ರ ಹೋಗುತ್ತದೆ. ಜಮೀನು ಹೋಗಲ್ಲ. ಮುಂದೆ ಚಕ್ರ ಬಡ್ಡಿ ಸೇರಿ ವಸೂಲಿ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Siddaramaiah 2 2

1974 ರಲ್ಲಿ ಕಾಂಗ್ರೆಸ್ (Congress) ಸರ್ಕಾರ ಇದ್ದಾಗ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ವಾಪಸ್ ಪಡೆಯಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆಯವರು ಈ ಬಗ್ಗೆ ಸ್ಪಷ್ಟ ನಿಲುವು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಶಕ್ತಿ ಯೋಜನೆ ಬಗ್ಗೆ ಮಾತನಾಡಿರೋದಕ್ಕೆ ಅವರು ದೆಹಲಿಯಿಂದ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಗ್ಯಾರಂಟಿ ಘೋಷಣೆ ಮಾಡುವ ವೇಳೆ ಹೀಗೆ ಹೇಳಿದರೆ ಜನರಿಗೆ ಅನುಮಾನ ಬರಲಿದೆ ಎಂದಿದ್ದಾರೆ. ಸದ್ಯ ಶಕ್ತಿ ಯೋಜನೆಯನ್ನ ಹಿಂಪಡೆಯುವುದನ್ನ ತಡೆದಿದ್ದಾರೆ. ಇದು ಸ್ಟೇ ರೀತಿ, ಚುನಾವಣೆ ಬಳಿಕ ಶಕ್ತಿ ಯೋಜನೆ ನಿಲ್ಲಿಸೋದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.

ಶಾಸಕರು ಕೂಡ ಇದರ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಶಿವಕುಮಾರ್ ಹಾಗೂ ಸಿ.ಎಂ ಸಿದ್ದರಾಮಯ್ಯ ಮಧ್ಯೆ ಹೊಂದಾಣಿಕೆ ಇಲ್ಲ. ಅವರು ನಿಲ್ಲಿಸುತ್ತೇವೆ ಎನ್ನುತ್ತಾರೆ, ಇವರು ಮುಂದುವರೆಸುತ್ತೇವೆ ಎನ್ನುತ್ತಾರೆ. ಇದನ್ನ ಪ್ರಧಾನಿ ಪ್ರಸ್ತಾಪ ಮಾಡಿದ್ದಕ್ಕೆ ಅವರನ್ನ ಕೆಟ್ಟದಾಗಿ ಬಿಂಬಿಸಿ, ಪುಡಾರಿ ಎಂದಿದ್ದಾರೆ. ಇದರಿಂದ ನಾವು ವಿಚಲಿತ ಆಗೋದಿಲ್ಲ ಎಂದಿದ್ದಾರೆ.

ಪ್ರಧಾನಿಯನ್ನ ಲಘುವಾಗಿ ನಿಂದಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಪ್ರಧಾನಿಗೆ ಎಲ್ಲಿ ಹೋದ್ರು ಗೌರವ ಇದೆ, ಮರ್ಯಾದೆ ಕೊಡ್ತಾರೆ. ಸಿದ್ದರಾಮಯ್ಯ ಬಂದ್ರೆ, ಬಂದ ಬಂದ ಸೈಟ್ ಕಳ್ಳ ಎನ್ನುತ್ತಾರೆ. ಈ ರೀತಿ ಕೆಟ್ಟ ಭಾವನೆ ಸಿಎಂ ಮೇಲೆ ಜನರಿಗೆ ಇದೆ ಎಂದು ಕುಟುಕಿದ್ದಾರೆ.

Share This Article