Haryana | ಐಎನ್‌ಎಲ್‌ಡಿಯ ದೀಪಾವಳಿ ಸಮಾರಂಭದಲ್ಲಿ ಪಾಕಿಸ್ತಾನ ಸಂಸದ ಅಬ್ದುಲ್ ರೆಹಮಾನ್ ಭಾಗಿ

Public TV
1 Min Read
Pakistani MP Abdul Rehman Kanju 2

ಚಂಡೀಗಢ: ಹರಿಯಾಣದ (Haryana) ಚೌತಾಲಾ ಗ್ರಾಮದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (Indian National Lok Dal) ಪಕ್ಷದ ವತಿಯಿಂದ ನಡೆದ ದೀಪಾವಳಿ ಸಮಾರಂಭದಲ್ಲಿ ಪಾಕಿಸ್ತಾನ ಸಂಸದ (Pakistan MP) ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.

2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Assembly Election) ಅರ್ಜುನ್, ಆದಿತ್ಯ ಚೌತಾಲಾ ಗೆಲುವು ಸಾಧಿಸಿದ ಹಿನ್ನೆಲೆ ಅಭಿನಂದನಾ ಕಾರ್ಯಕ್ರಮ ಹಾಗೂ ದೀಪಾವಳಿ ಆಚರಣೆ ಸಮಾರಂಭದಲ್ಲಿ ಪಾಕಿಸ್ತಾನದ ಸಂಸದ ಅಬ್ದುಲ್ ರೆಹಮಾನ್ ಕಂಜು (Abdul Rehman Kanju) ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು.ಇದನ್ನೂ ಓದಿ: ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ

2024ರ ಚುನಾವಣೆಯಲ್ಲಿ ರಾನಿಯಾ ಕ್ಷೇತ್ರದಿಂದ ಅರ್ಜುನ್ ಚೌತಾಲ ಹಾಗೂ ದಬ್ವಾಲಿ ಕ್ಷೇತ್ರದಿಂದ ಆದಿತ್ಯ ದೇವಿಲಾಲ್ ಚೌತಾಲ ಇಬ್ಬರು ಸುಮಾರು 50,000 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಐಎನ್‌ಎಲ್‌ಡಿ ಗೆಲುವು ಸಾಧಿಸಿತು.

Pakistani MP Abdul Rehman Kanju 1

ಕಾರ್ಯಕ್ರಮದಲ್ಲಿ ಅಬ್ದುಲ್ ರೆಹಮಾನ್ ಭಾಗಿಯಾಗಿ ಹಾಗೂ ಚೌತಾಲಾ ಗ್ರಾಮದ ನಿವಾಸಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದರ ಕುರಿತು ಪಕ್ಷ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಕಾರ್ಯಕ್ರಮದಲ್ಲಿ ಅಬ್ದುಲ್ ರೆಹಮಾನ್ ಮಾತನಾಡಿ, ಪಂಜಾಬ್‌ನಲ್ಲಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ತಂದೆಯನ್ನು ಕಳೆದುಕೊಂಡೆ, ಬಳಿಕ ಚೌತಾಲ ಕುಟುಂಬವು ನನ್ನನ್ನು ಬೆಳೆಸಿದೆ ಎಂದು ಹಳ್ಳಿಯೊಂದಿಗೆ ತಮಗಿರುವ ನಿಕಟ ಸಂಬಂಧದ ಕುರಿತು ತಿಳಿಸಿದರು. ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರು ಆದ್ದರಿಂದ ನಾವು ಅವರನ್ನು ಗೌರವಿಸಬೇಕು ಎಂದು ಯುವಜನತೆಗೆ ಮನವಿ ಮಾಡಿದರು.

Pakistani MP Abdul Rehman Kanju 3

ಜೀವನದ ಕಷ್ಟದ ಸಮಯದಲ್ಲಿ ನನ್ನನ್ನು ಬೆಳೆಸಿದ್ದಕ್ಕಾಗಿ ನಿಮಗೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಚೌತಾಲ ಕುಟುಂಬವು ಸದಾ ನನ್ನ ಏಳಿಗೆಯನ್ನು ಬಯಸಿದ್ದು, ಇಂದು ಕೂಡ ನನ್ನ ಯಶಸ್ಸಿನಿಂದ ಖುಷಿ ಪಡುತ್ತಾರೆ. ಎಲ್ಲಾ ಗ್ರಾಮಸ್ಥರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು.ಇದನ್ನೂ ಓದಿ: ಬೆಂಗಳೂರಿನ ನಡು ರಸ್ತೆಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್‌ ಸ್ಕೂಟರ್‌

Share This Article