ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ, ಬೆಂಗಳೂರು ಮೂಲದ ನಾಲ್ವರ ರಕ್ಷಣೆ

Public TV
1 Min Read
gokarna beach

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಹಾಗೂ ಬೆಂಗಳೂರು ಮೂಲದ ನಾಲ್ವರು ಪ್ರವಾಸಿಗರ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.

ಬೆಂಗಳೂರಿನಿಂದ ಬಂದಿದ್ದ ಇವರು ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿದ್ದು ರಕ್ಷಣೆಗಾಗಿ ಕೂಗಿದ್ದಾರೆ. ಈ ವೇಳೆ ಸ್ಥಳೀಯ ಅಡ್ವೆಂಚರ್ಸ್ ಬೋಟ್‌ನಲ್ಲಿ ಲೈಫ್‌ಗಾರ್ಡ್‌ಗಳಾದ ನಾಗೇಂದ್ರ, ಮಂಜುನಾಥ್ ಹರಿಕಾಂತ್ರ, ಶೇಖರ್ ಹರಿಕಾಂತ್ರ ಅವರು ರಕ್ಷಣೆ ಮಾಡಿದ್ದಾರೆ. ರಷ್ಯಾ ಮೂಲದ ಜೈನ್ (41) , ಬೆಂಗಳೂರಿನ ಎಬಿನ್ ಡೇವಿಡ್ (35), ಮಧುರ ಅಗರ್ವಾಲ್ (35), ರಮ್ಯ ವೆಂಕಟರಮಣ (34) ರಕ್ಷಣೆಗೊಳಗಾದವರು.

ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಸಮುದ್ರದಲ್ಲಿ ಸುಳಿಗೆ ಸಿಲುಕಿ ಮುಳುಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ. ಆಂದ್ರ ಮೂಲದ ಚರಣ್ (23), ಶ್ರೀಕಾಂತ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು. ಆಂಧ್ರದ ಕಡಪ ಜಿಲ್ಲೆಯವರಾಗಿದ್ದು, ನಾಲ್ಕು ಜನ ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು.

ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಗೆ ಸಿಲುಕಿ ಇಬ್ಬರೂ ಪ್ರವಾಸಿಗರು ಮುಳುಗುತ್ತಿದ್ದುದನ್ನು ಗಮನಿಸಿ ಕರ್ತವ್ಯನಿರತ ಲೈಫ್‌ಗಾರ್ಡ್ ಸಿಬ್ಬಂದಿ ಹರೀಶ್ ಮೂಡಂಗಿ, ಮಂಜೇಶ್ ಹರಿಕಂತ್ರ, ಪ್ರಭಾಕರ ಅಂಬಿಗ ಅವರು ಪ್ರವಾಸಿಗರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Share This Article