‘ಬಜಾರ್’ ನಟಿ ಅದಿತಿ ಪ್ರಭುದೇವ (Aditi Prabhudeva) ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಇದೀಗ ಕುಟುಂಬದ ಜೊತೆ ದೀಪಾವಳಿ ಹಬ್ಬ ಆಚರಿಸಿರುವ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾಗೆ ಟೈಟಲ್ ಫಿಕ್ಸ್
ಮುದ್ದಿನ ಮಗಳು ನೇಸರ, ಪತಿ ಯಶಸ್ ಜೊತೆ ಕುಳಿತು ಕ್ಯಾಮರಾಗೆ ನಟಿ ಪೋಸ್ ಕೊಟ್ಟಿದ್ದಾರೆ. ಅದಿತಿ ಪುತ್ರಿ ನೇಸರ ಪಿಂಕ್ ಬಣ್ಣ ಡ್ರೆಸ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಅಭಿಮಾನಿಗಳಿಗೆ ನಟಿ ತಿಳಿಸಿದ್ದಾರೆ.
View this post on Instagram
ಇನ್ನೂ ಉದ್ಯಮಿ ಯಶಸ್ ಜೊತೆ 2022ರಲ್ಲಿ ನಟಿ ಮದುವೆಯಾದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನವೆಂಬರ್ 22ರಂದು ಹಸೆಮಣೆ ಏರಿದರು.
ಅಂದಹಾಗೆ, ಬಜಾರ್, ಟ್ರಿಪಲ್ ರೈಡಿಂಗ್, ಬ್ರಹ್ಮಚಾರಿ, ಧೈರ್ಯಂ, ತೋತಾಪುರಿ, ತೋತಾಪುರಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ನಟಿಸಿದ್ದಾರೆ.