44 ವರ್ಷಗಳ ನಂಟು ಕಡಿದುಕೊಂಡ ಮುಂಬೈ ಕಾಂಗ್ರೆಸ್ ಮುಖಂಡ – 5 ಬಾರಿ ಕಾರ್ಪೋರೇಟರ್ ಆಗಿದ್ದ ರವಿರಾಜ ಬಿಜೆಪಿ ಸೇರ್ಪಡೆ

Public TV
1 Min Read
Mumbai Ravi Raja Joins BJP

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Assembly Elections) ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಮುಂಬೈನ (Mumbai) ಕಾಂಗ್ರೆಸ್ (Congress) ಹಿರಿಯ ಮುಖಂಡ ಹಾಗೂ 5 ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದ ರವಿರಾಜ (Ravi Raja) ಬಿಜೆಪಿ ಸೇರಿದ್ದಾರೆ.

44 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರವಿರಾಜ ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ 44 ವರ್ಷಗಳ ನಂಟನ್ನು ರವಿರಾಜ ಶಾಶ್ವತವಾಗಿ ಕಡಿದುಕೊಂಡಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮತ್ತು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರು ರವಿರಾಜ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದನ್ನೂ ಓದಿ: ಜಮೀನು ವಿವಾದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ – 6 ಮಂದಿಯ ವಿರುದ್ಧ ಎಫ್‌ಐಆರ್

Mumbai Ravi Raja Joins BJP

ಬಳಿಕ ಮಾತನಾಡಿದ ದೇವೇಂದ್ರ ಫಡ್ನವಿಸ್, ಇನ್ನಷ್ಟು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಮಹಾಯತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಜನರಲ್ಲಿದೆ. ರವಿರಾಜ ಮುಂಬೈನಲ್ಲಿರುವ ಸಮಸ್ಯೆಗಳಿಗೆ ಎನ್‌ಸೈಕ್ಲೋಪೀಡಿಯಾ ಇದ್ದಂತೆ. ಅವರು ನಮ್ಮ ಹಳೆಯ ಸ್ನೇಹಿತ ಕೂಡ ಹೌದು. ರವಿರಾಜ ಮತ್ತವರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರಿದ್ದು ಪಕ್ಷದ ಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ಸಿಎಂಗೆ ಇ.ಡಿ ಬಂದ ಮೇಲೆ ಭಯ ಆಗಿದೆ, ಅದಕ್ಕೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ: ಜೋಶಿ

Share This Article