ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ: ಶಿವರಾಜ್‌ಕುಮಾರ್

Public TV
1 Min Read
shivarajkumar 1 1

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನರಾಗಿ 3 ವರ್ಷಗಳಾಗಿವೆ. ಅಪ್ಪು 3ನೇ ಪುಣ್ಯಸ್ಮರಣೆಯಂದು (ಅ.29) ಸ್ಮಾರಕಕ್ಕೆ ಶಿವಣ್ಣ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಶಿವಣ್ಣ ಮಾತನಾಡಿ, ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ ಎಂದು ಶಿವಣ್ಣ (Shivarajkumar) ಮಾತನಾಡಿದ್ದಾರೆ.

ಅಪ್ಪುನ ಅಷ್ಟು ಬೇಗ ಮರೆಯೋಕೆ ಆಗಲ್ಲ. ಶೂಟಿಂಗ್ ಹೋದರೂ ಎಲ್ಲೇ ಇದ್ದರೂ ಪುನೀತ್ ನೆನಪಾಗುತ್ತಲೇ ಇರುತ್ತಾನೆ. ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ. ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ. ನಾನು ಈ ಜಾಗಕ್ಕೆ ಬರಬೇಕು ಅಂತ ಏನೂ ಇಲ್ಲ. ಈ ಜಾಗದಲ್ಲಿ ಒಂದು ಪಾಸಿಟಿವ್ ವೈಬ್ ಇದೆ ಎಂದಿದ್ದಾರೆ. ಇದನ್ನೂ ಓದಿ:ಅಪ್ಪು ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡ ಶ್ರೀದೇವಿ ಭೈರಪ್ಪ

puneeth rajkumar 1 1

ಅಪ್ಪುನ ಕಳೆದುಕೊಂಡ ನೋವು ಇದ್ದೆ ಇದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವನನ್ನು ನೆನಪಿಸಿಕೊಳ್ಳುತ್ತೇವೆ. ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರಲ್ಲಿ ಅಪ್ಪುನ ನೋಡ್ತೀನಿ ಎಂದಿದ್ದಾರೆ. ಅಭಿಮಾನಿಗಳು ತೋರಿಸುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದು ಶಿವಣ್ಣ ಎಂದಿದ್ದಾರೆ.

ಅಂದಹಾಗೆ, ನಟ ಪುನೀತ್‌ರಾಜ್‌ಕುಮಾರ್ ಅವರು 2021ರ ಅ.29ರಂದು ನಿಧನರಾದರು.

Share This Article