ಪುನೀತ್ ರಾಜ್‌ಕುಮಾರ್ (Puneeth Rajkumar) ಅಂದರೆ ಎಲ್ಲರಿಗೂ ಒಂದು ವಿಶೇಷ ಪ್ರೀತಿ ಇದೆ. ಇನ್ನೂ ದೊಡ್ಮನೆಯ ರಾಘಣ್ಣ ಸೊಸೆ ಶ್ರೀದೇವಿ ಭೈರಪ್ಪ ಅವರು ಪುನೀತ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಪ್ಪು ಪುಣ್ಯಸ್ಮರಣೆಯಂದು (ಅ.29) ಅವರನ್ನು ಶ್ರೀದೇವಿ (Sridevi Byrappa) ಸ್ಮರಿಸಿದ್ದಾರೆ. ಅಪ್ಪು ಈ ಹಿಂದೆ ಹಾಡಿರುವ ವಿಶೇಷ ವಿಡಿಯೋ ಶೇರ್ ಮಾಡಿ, ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವರ್ಷ ಮೂರು, ಮರೆಯದ ನೆನಪು ನೂರು: ಅಪ್ಪು ನೆನೆದ ರಾಘಣ್ಣ
ಕುಟುಂಬದ ಕಾರ್ಯಕ್ರಮದಲ್ಲಿ ಕವಿರತ್ನ ಕಾಳಿದಾಸ ಚಿತ್ರದ ‘ಸದಾ ಕಣ್ಣಲ್ಲಿ’ ಹಾಡನ್ನು ಅಪ್ಪು ಹಾಡಿದ್ದರು. ಅದನ್ನು ಸ್ವತಃ ಶ್ರೀದೇವಿ ಅವರು ಚಿತ್ರೀಕರಿಸಿದ್ದರು. ಆ ವಿಡಿಯೋವನ್ನು ಹಂಚಿಕೊಂಡು, ಚಿಕ್ಕಂದಿನಿಂದಲೂ ಅಪ್ಪು ಸಿನಿಮಾ ನೋಡುತ್ತಾ ಬೆಳೆದಿದ್ದೇನೆ. ಆದರೆ ಕಳೆದ 3 ವರ್ಷಗಳಿಂದ ನಾನು ಯಾವುದೇ ಚಿತ್ರವನ್ನು ನಾನು ನೋಡಿಲ್ಲ. ನಿಮ್ಮ ಸಿನಿಮಾಗಳಿಲ್ಲದೆ ಸಿನಿಮಾ ನೋಡುವ ಅನುಭವ ನಿಜಕ್ಕೂ ನನ್ನನ್ನು ಘಾಸಿ ಮಾಡುತ್ತಿದೆ. ಮಿಸ್ ಯೂ.. ನಿಮ್ಮ ಅಭಿಮಾನಿ ಎಂದು ಬರೆದು ಶ್ರೀದೇವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
ಸದ್ಯ ಉನ್ನತ ಶಿಕ್ಷಣಕ್ಕಾಗಿ ಶ್ರೀದೇವಿ ಭೈರಪ್ಪ ಅವರು ಅಮೆರಿಕಾದಲ್ಲಿದ್ದಾರೆ. ಅಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾರೆ.