3 ವರ್ಷ ಅವರಿಲ್ಲದೆ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ: ಯುವ ರಾಜ್‌ಕುಮಾರ್

Public TV
1 Min Read
FotoJet 42

ಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಇಂದಿಗೆ (ಅ.29) ನಿಧನರಾಗಿ 3 ವರ್ಷಗಳು ಕಳೆದಿದೆ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಯುವ ರಾಜ್‌ಕುಮಾರ್ ಮಾತನಾಡಿ, ಚಿಕ್ಕಪ್ಪ ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿದರು. ನಾವೆಲ್ಲರೂ ಅವರ ತರ ಬದುಕೋಕೆ ಪ್ರಯತ್ನಿಸೋಣ ಎಂದು ಯುವ (Yuva Rajkumar) ಮಾತನಾಡಿದರು. ಇದನ್ನೂ ಓದಿ:ವರ್ಷ ಮೂರು, ಮರೆಯದ ನೆನಪು ನೂರು: ಅಪ್ಪು ನೆನೆದ ರಾಘಣ್ಣ

Puneeth Rajkumar 3rd Year Death Anniversary Fans Visiting Puneeth Rajkumar Memorial In Large Numbersಅವರಿಲ್ಲದೇ ಮೂರು ವರ್ಷ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ. ಅವರ ಜೊತೆ ಮಾತನಾಡದೇ ಕಷ್ಟ, ಸುಖ ಹಂಚಿಕೊಳ್ಳದ ದಿನಾನೇ ಇರಲಿಲ್ಲ. ಪ್ರತಿದಿನ ಅವರು ನಮ್ಮ ಜೊತೆ ಇರುತ್ತಾರೆ. ಅವರ ಹಾರೈಕೆ ನಮ್ಮೆಲರ ಮೇಲಿದೆ ಎಂದಿದ್ದಾರೆ ಯುವ. ಇದನ್ನೂ ಓದಿ:ಅಪ್ಪು ಅಗಲಿಕೆಗೆ 3 ವರ್ಷ, ರಾಜ್ಯಾದ್ಯಂತ ಪುಣ್ಯಸ್ಮರಣೆ – ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಪುನೀತ್ ಚಿಕ್ಕಪ್ಪ ತರಹ ಯಾರು ಆಗೋಕೆ ಆಗಲ್ಲ. ನನ್ನ ಪ್ರಕಾರ, ಅವರು ಒಂದು ಉದಾಹರಣೆ ತೋರಿಸಿ ಕೊಟ್ಟು ಹೋಗಿದ್ದಾರೆ. ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕು, ಇನ್ನೊಬ್ಬರಿಗೆ ಯಾವ ರೀತಿ ಸಹಾಯ ಮಾಡಬೇಕು ಅನ್ನೋದನ್ನು ತೋರಿಸಿದ್ದಾರೆ. ಆ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಎಂದಿದ್ದಾರೆ.

ಈ ವೇಳೆ, ಕೆಆರ್‌ಜಿ ಸಂಸ್ಥೆ, ಜಯಣ್ಣ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಯುವ ನಾಯಕನಾಗಿ ನಟಿಸುತ್ತಿರುವ ಕುರಿತು ಮಾತನಾಡಿದರು. ಸದ್ಯದಲ್ಲೇ ಫಸ್ಟ್ ಲುಕ್ ಅನೌನ್ಸ್ ಮಾಡುತ್ತೇವೆ. ಮುಂದಿನ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಯುವ ಮನವಿ ಮಾಡಿದರು.

Share This Article