ಭೇಟಿಗೆ ಹಂಬಲಿಸುತ್ತಿರುವ ನಟ, ನಟಿಯರಿಗೆ ನೋ ಎಂದ ದರ್ಶನ್

Public TV
1 Min Read
darshan ballari jail 1

ಬಳ್ಳಾರಿ: ತನ್ನ ಭೇಟಿಗೆ ಹಂಬಲಿಸುತ್ತಿರುವ ಸ್ಯಾಂಡಲ್‌ವುಡ್‌ ನಟ, ನಟಿಯರಿಗೆ ದರ್ಶನ್ (Darshan) ನೋ ಎಂದಿದ್ದಾರೆ.

ಯಾರೂ ಬಳ್ಳಾರಿ ಜೈಲಿಗೆ (Ballari Jail) ಬರುವುದು ಬೇಡ, ಸದ್ಯಕ್ಕೆ ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ ಎಂದು ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi) ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ದಾಳಿ ಬೆದರಿಕೆ – ಇರಾನ್ ಸರ್ವೋಚ್ಚ ನಾಯಕನ ಎಕ್ಸ್‌ ಖಾತೆ ಅಮಾನತು

ದರ್ಶನ್ ಬಳ್ಳಾರಿ ಜೈಲಿಗೆ ಬಂದು ಎರಡು ತಿಂಗಳಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಚಾರ್ಜ್‌ಶೀಟ್‌, ಜಾಮೀನು ಟೆನ್ಶನ್‌ ಜೊತೆಗೆ ಜೊತೆಗೆ ಬೆನ್ನು ನೋವಿನಿಂದ ಹೈರಾಣಾಗಿದ್ದಾರೆ.

 

ಎರಡು ತಿಂಗಳಲ್ಲಿ ಪತ್ನಿ, ತಾಯಿ, ಸಹೋದರ, ಸಹೋದರಿ, ಸಂಬಂಧಿಗಳಾದ ಸುಶಾಂತ್, ಹೇಮಂತ್, ಚಂದ್ರ ಭೇಟಿ ಮಾಡಿದ್ದಾರೆ. ಅಲ್ಲದೇ ನಟ ಧನ್ವಿರ್, ನಿರ್ದೇಶಕ ಪ್ರಕಾಶ್, ಹರಿಕೃಷ್ಣ, ಶೈಲಜಾ ನಾಗ್ ಸೇರಿ ಒಂದಷ್ಟು ಸ್ನೇಹಿತರು ಬಂದು ಹೋಗಿದ್ದಾರೆ‌.

ಈಗ ದರ್ಶನ್ ಅವರನ್ನು ನೋಡಲು ಹಲವು ನಟ ನಟಿಯರು ಬಳ್ಳಾರಿ ಜೈಲಿಗೆ ಬರಲು ಮುಂದಾಗಿದ್ದು ಪತ್ನಿ ವಿಜಯಲಕ್ಷ್ಮಿ ಬಳಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಲು ನಟ, ನಟಿಯರು ಅವಕಾಶವನ್ನು ಕೇಳುತ್ತಿದ್ದಾರೆ. ಇದನ್ನೂ ಓದಿ: ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ: ಹಾಸನಾಂಬೆ ಸನ್ನಿಧಿಯಲ್ಲಿ ತರುಣ್ ಸುಧೀರ್ ಮಾತು

ಈ ವಿಚಾರವನ್ನು ದರ್ಶನ್‌ಗೆ ವಿಜಯಲಕ್ಷ್ಮಿ ತಿಳಿಸಿದಾಗ, ಸದ್ಯಕ್ಕೆ ಯಾರು ಬರುವುದು ಬೇಡ. ಸ್ವಲ್ಪ ದಿನದಲ್ಲೇ ಜಾಮೀನು ಸಿಗಬಹುದು. ಆಗ ನಾನೇ ಬೆಂಗಳೂರಿಗೆ ಬರುತ್ತೇನೆ ಅಲ್ಲಿಯೇ ಭೇಟಿಯಾಗೋಣ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.

Share This Article