ಚಿತ್ರಮಂದಿರದಲ್ಲಿ ಹಾಲಿವುಡ್‌ನ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಚಿತ್ರದ ಅಬ್ಬರ- ಪ್ರೇಕ್ಷಕರ ಮೆಚ್ಚುಗೆ

Public TV
1 Min Read
venom the last dance

ಹಾಲಿವುಡ್ (Hollywood) ಸಿನಿಮಾಗಳನ್ನು ನೋಡುವವರಿಗೆ ವೆನಮ್ ಫ್ರಾಂಚೈಸ್ ಬಗ್ಗೆ ಗೊತ್ತೇ ಇರುತ್ತದೆ. ಈ ಚಿತ್ರದ ಎರಡು ಭಾಗಗಳು ಈಗಾಗಲೇ ಸೂಪರ್ ಹಿಟ್ ಕಂಡಿವೆ. ಇದೀಗ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ (Venom: The Last Dance) ಸಿನಿಮಾದ ಕೊನೆಯ ಫ್ರಾಂಚೈಸ್ ಇಂದು (ಅ.25) ತೆರೆಗೆ ಬಂದಿದೆ. ಈ ಹಿಂದಿನ ಎರಡು ಚಿತ್ರಗಳ ಯಶಸ್ಸಿನ ನಂತರ, ಎಡ್ಡಿ ಬ್ರಾಕ್ ಮತ್ತು ವೆನಮ್ ಕಥೆಯು ಅಂತಿಮವಾಗಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ವಿಲನ್?

FotoJet 34

‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಸಿನಿಮಾದ ಪ್ರೀಮಿಯರ್‌ನ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿಯೂ ದಾಖಲೆ ಬರೆದಿದ್ದ, ಈ ಚಿತ್ರವೀಗ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದೆ. ಪ್ರಬಲ ತಾರಾಗಣ, ಆಕರ್ಷಕ ಪಾತ್ರಗಳು ಮತ್ತು ರೋಮಾಂಚಕ ಕಥಾಹಂದರದೊಂದಿಗೆ, ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದೆ.

FotoJet 1 17

ಈ ಚಿತ್ರದಲ್ಲಿ ಟಾಮ್ ಹಾರ್ಡಿ ವೆನಮ್ ಪಾತ್ರದಲ್ಲಿ ಜೀವಿಸಿದ್ದಾರೆ. ಚಿತ್ರದಲ್ಲಿ ಚಿವೆಟೆಲ್ ಎಜಿಯೋಫೋರ್, ಜುನೋ ಟೆಂಪಲ್, ರೈಸ್ ಇಫಾನ್ಸ್, ಪೆಗ್ಗಿ ಲು, ಅಲನ್ನಾ ಉಬಾಚ್ ಮತ್ತು ಸ್ಟೀಫನ್ ಗ್ರಹಾಂ ಮುಂತಾದವರು ಅಭಿನಯಿಸಿದ್ದಾರೆ. ಹಾರ್ಡಿ ಮತ್ತು ಮಾರ್ಸೆಲ್ ಅವರ ಕಥೆಯನ್ನು ಆಧರಿಸಿ ಕೆಲ್ಲಿ ಮಾರ್ಸೆಲ್ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರವನ್ನು ಅವಿ ಅರಾದ್, ಮ್ಯಾಟ್ ಟೋಲ್ಮಾಚ್, ಆಮಿ ಪಾಸ್ಕಲ್, ಕೆಲ್ಲಿ ಮಾರ್ಸೆಲ್, ಟಾಮ್ ಹಾರ್ಡಿ ಮತ್ತು ಹಚ್ ಪಾರ್ಕರ್ ನಿರ್ಮಿಸಿದ್ದಾರೆ.

Share This Article