ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

Public TV
1 Min Read
Tumakuru Murder

ತುಮಕೂರು: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದಡಿ ಸೊಸೆ ಹಾಗೂ ಮಗನನ್ನು ತುಮಕೂರು (Tumakuru) ಜಿಲ್ಲೆ ಹೆಬ್ಬೂರು ಪೊಲೀಸರು (Hebbur Poice) ಬಂಧಿಸಿದ್ದಾರೆ.

ಕೆಂಪಮ್ಮ (57) ಮೃತ ದುರ್ದೈವಿ. ಕೆಂಪಮ್ಮ ತುಮಕೂರು ತಾಲೂಕಿನ ಶಿರವರ ಗ್ರಾಮದ ಬಳಿಯಿರುವ ಕಲ್ಲುಪಾಳ್ಯ ನಿವಾಸಿಯಾಗಿದ್ದು, ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಸೊಸೆ ಉಮಾದೇವಿ ನಿರಂತರವಾಗಿ ಕಿರುಕುಳ ಕೊಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕೆಂಪಮ್ಮ ಪುತ್ರಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ| ಬಾಬಾ ಸಿದ್ದಿಕಿ ಪುತ್ರ ಎನ್‌ಸಿಪಿಗೆ ಸೇರ್ಪಡೆ

ಕೆಂಪಮ್ಮನದ್ದು ಸಹಜ ಸಾವಲ್ಲ, ಕೊಲೆ ಎಂದು ಕೆಂಪಮ್ಮನ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತ ಕೆಂಪಮ್ಮಗೆ ಹಲ್ಲೆ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸೊಸೆ ಉಮಾದೇವಿ (30) ಹಾಗೂ ಮಗ ರಾಜೇಶ್‌ನನ್ನು (35) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ

ಪತ್ನಿಗೆ ಸಹಕರಿಸಿದ ಆರೋಪದಡಿ ಕೆಂಪಮ್ಮ ಪುತ್ರ ರಾಜೇಶ್‌ನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

Share This Article