Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

Cinema

‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

Public TV
Last updated: October 24, 2024 7:39 pm
Public TV
Share
3 Min Read
KUSHEE RAVI 1
SHARE

ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲು ಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ ‘S/O ಮುತ್ತಣ್ಣ’. ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘S/O ಮುತ್ತಣ್ಣ’ನಿಗೆ (S/o Muttanna) ಸಾಥ್ ಕೊಟ್ಟಿದ್ದಾರೆ.

KUSHEE RAVI

ಪ್ರಣಂ ನಟನೆಯ ಸಿನಿಮಾದ ಟೀಸರ್‌ ಬಿಡುಗಡೆ ಬಳಿಕ ಮಾತನಾಡಿ ಡಾ.ಶಿವರಾಜ್ ಕುಮಾರ್, ದೇವರಾಜ್ ಅವರ ಫ್ಯಾಮಿಲಿ ಎಂದರೆ ನಮಗೆ ಅಭಿಮಾನ, ಪ್ರೀತಿ, ವಿಶ್ವಾಸ. ಟೀಸರ್ ನೋಡಿ ಖುಷಿಯಾಯ್ತು. ತಂದೆ- ಮಗನ ಬಾಂಧವ್ಯ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅಪ್ಪಾಜಿ ಜೊತೆ ನನ್ನ ಹಳೆ ನೆನಪುಗಳನ್ನು ನೋಡಿ ಖುಷಿಯಾಯ್ತು, ತಂದೆ ಮಗನ ಬಾಂಧವ್ಯದ ಸಿನಿಮಾ ಚೆನ್ನಾಗಿ ಹೋಗುತ್ತದೆ ಎಂಬ ಭರವಸೆ ಇದೆ. ಈ ಟೀಸರ್ ಸಮಾರಂಭದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ದೇವರಾಜ್ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ. ಕನ್ನಡ ಇಂಡಸ್ಟ್ರಿಗೆ ಯಾರೇ ಆಗಲಿ ಸಪೋರ್ಟ್ ಮಾಡುತ್ತೇವೆ. ಯಾರೇ ಆಗಲಿ ನಮ್ಮ ಭಾಷೆ ಉಳಿಬೇಕು ಅಂದರೆ ಯಾವ ಹೀರೋ ನಟಿಸಿದರೂ ಆ ಸಿನಿಮಾಗಳು ಗೆಲ್ಲಬೇಕು ಎಂದರು.

FotoJet 30

ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮುತ್ತಣ್ಣ ಟೈಟಲ್ ಯಾಕೆ ಇಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಾಗಿರಬೇಕು. ಒರಿಜನಲ್ ಮುತ್ತಣ್ಣನೇ ಬಂದಿದ್ದಾರೆ. ಪುರಾತನ ಫಿಲ್ಮಂಸ್ ಹರಿಯಣ್ಣ ಶಿವಣ್ಣನಿಗೆ (Shivarajkumar) ದೊಡ್ಡ ಅಭಿಮಾನಿ. ಶಿವಣ್ಣನೇ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದು ಎಲ್ಲರ ಕನಸಾಗಿತ್ತು. ಯಂಗ್ ಡೈನಾಮಿಕ್ ಪ್ರಣಂಗೆ ಒಳ್ಳೆದಾಗಲಿ. ಇವರು ಬೆಳೆಯಬೇಕು, ಉಳಿಯಬೇಕು, ತಂದೆ- ತಾಯಿಯಂತೆಯೇ ಹೆಸರನ್ನು ಗಳಿಸಬೇಕು ಎನ್ನುವುದು ಯಾವುದೇ ಕಲಾವಿದರ ಮಕ್ಕಳಿಗಿರುವ ಆಸೆ. ಅದನ್ನು ಪ್ರಜ್ವಲ್ ಹಾಗೂ ಪ್ರಣಂ ಇಬ್ಬರಲ್ಲಿಯೂ ಇದೆ. ಪ್ರಣಂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

FotoJet 1 14

ನಾಯಕ ಪ್ರಣಂ ದೇವರಾಜ್ (Pranam Devaraj) ಮಾತನಾಡಿ, ರಿಯಲ್ ಸನ್ ಆಫ್ ಮುತ್ತಣ್ಣ, ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ಮಾಡಿ ಕೊಟ್ಟಿರೋದು ಖುಷಿ ಕೊಟ್ಟಿದೆ. ನಾವೆಲ್ಲರೂ ಶಿವಣ್ಣನ ಅಭಿಮಾನಿ. ನಿಮ್ಮನ್ನು ನೋಡಿಕೊಂಡು ಬೆಳೆದಿರುವುದು. ನಿಮ್ಮ ಡ್ಯಾನ್ಸ್, ನಟನೆ, ಆಕ್ಷನ್ ಎಲ್ಲದಕ್ಕೂ ಅಭಿಮಾನಿ. ನಾನು ಸಾಕಷ್ಟು ಚಿಕ್ಕವನು ಅವರ ಬಗ್ಗೆ ಮಾತಾನಾಡಲು. ಮುಂದೆ ಬರುವ ಜನರೇಷನ್ ಗೆ ನೀವೇ ಸ್ಫೂರ್ತಿ. ಸಾಮಾನ್ಯ ಮನುಷ್ಯ ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ ಆದ ಬಳಿಕ ಎಷ್ಟೋ ಕಥೆ ಹುಟ್ಟುತ್ತವೆ. ಅಪ್ಪ- ಮಗನ ಬಾಂಧವ್ಯವನ್ನು ಹೇಗೆ ಇರುತ್ತೇ ಅನ್ನೋದನ್ನು ಸನ್ ಆಫ್ ಮುತ್ತಣ್ಣದಲ್ಲಿ ಮಾಡಿದ್ದೇವೆ. ನಾನು ಸ್ವಲ್ಪ ಬೆಟ್ಟರ್ ಆಕ್ಟರ್ ಆಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕರು ಕಾರಣ. ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ ಎಂದು ತಿಳಿಸಿದರು.

FotoJet 2 11

ನಟಿ ಖುಷಿ ರವಿ (Kushee Ravi) ಮಾತನಾಡಿ, ಶಿವಣ್ಣ ನಮ್ಮ ಸಿನಿಮಾದ ಟೀಸರ್ ಲಾಂಚ್ ಮಾಡೋದಿಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ದೇವರಾಜ್ ಸರ್, ಅಮ್ಮ, ಪ್ರಜ್ವಲ್ ಸರ್, ರಾಗಿಣಿ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಸನ್ ಆಫ್ ಮುತ್ತಣ್ಣ, ಅಪ್ಪ- ಮಗನ ಎಮೋಷನ್ ಇರುವ ಸಿನಿಮಾ. ಇಡೀ ಕುಟುಂಬ ನೋಡುವಂತಹ ಸಿನಿಮಾ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿದೆ ಎಂದು ತಿಳಿಸಿದರು.

pranam
ಎಮೋಷನ್ ನಿಂದಲೇ ಶುರುವಾಗುವ ಟೀಸರ್‌ನಲ್ಲಿ ಅಪ್ಪ- ಮಗನ ಬಾಂಧವ್ಯವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಟೀಸರ್ ನಲ್ಲಿ ಡೈಲಾಗ್ ಗಳು ಕಾಡುತ್ತವೆ. ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷರ ಕಲಿಸುವ ಅಪ್ಪ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗುವ ಕ್ಯಾಪ್ಟನ್ ಆಗಿ ರಂಗಾಯಣ ರಘು ಇಷ್ಟವಾಗ್ತಾರೆ. ಅಪ್ಪನನ್ನು ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುವ ಮಗನಾಗಿ ಪ್ರಣಂ ಗಮನಸೆಳೆಯುತ್ತಾರೆ.

 

View this post on Instagram

 

A post shared by Pranam Devaraj (@pranamdevaraj)

ಶ್ರೀಕಾಂತ್‌ ಹುಣಸೂರು ‘S/O ಮುತ್ತಣ್ಣ’ನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪುರಾತನ‌ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

TAGGED:kushee raviS/0 MuttannaS/O ಮುತ್ತಣ್ಣsandalwoodಖುಷಿ ರವಿಪ್ರಣಂ ದೇವರಾಜ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Sai Pallavi
ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಸಾಯಿಪಲ್ಲವಿ ನಟನೆ ಫಿಕ್ಸ್‌
Bollywood Cinema Latest Top Stories
Sohail Khan
ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಸಲ್ಮಾನ್ ಖಾನ್ ಸಹೋದರ
Bollywood Cinema Latest
Kichcha Sudeep 2
ಮಸ್ತ್ ಮಲೈಕಾ ಜೊತೆ ಕಿಚ್ಚ ಸಖತ್ ಡಾನ್ಸ್‌
Cinema Latest Sandalwood
Actor Shivamanju
ನಿರ್ದೇಶಕನಾದ ಹಾಸ್ಯ ನಟ ಶಿವಮಂಜು
Cinema Latest Sandalwood Top Stories

You Might Also Like

kea
Bengaluru City

ಯುಜಿ ವೈದ್ಯಕೀಯ: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ- ಕೆಇಎ

Public TV
By Public TV
3 minutes ago
DC office Hassan
Districts

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್

Public TV
By Public TV
12 minutes ago
Hassan Accident
Crime

3 ಬೈಕ್‌ಗಳ ನಡ್ವೆ ಸರಣಿ ಅಪಘಾತ – ಮೂವರು ಯುವಕರ ಕೈ-ಕಾಲು ಮುರಿತ

Public TV
By Public TV
29 minutes ago
Vijayapura Bala Academy Award
Districts

2023-24ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗೆ ಅನುಪ್ರಿಯಾ ಕುಲಕರ್ಣಿ ಆಯ್ಕೆ

Public TV
By Public TV
42 minutes ago
EGG
Bengaluru City

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, 200ಕ್ಕೂ ಹೆಚ್ಚು ಕಡೆಯಿಂದ ಸ್ಯಾಂಪಲ್ ಸಂಗ್ರಹ

Public TV
By Public TV
1 hour ago
Apache
Latest

ಭಾರತೀಯ ನೌಕಾಪಡೆಗೆ 3 ಆಕ್ರಮಣಕಾರಿ ಅಪಾಚೆ ಹೆಲಿಕಾಪ್ಟರ್‌; ಪಾಕ್‌ ಗಡಿಯಲ್ಲಿ ನಿಯೋಜಿಸಲು ಪ್ಲ್ಯಾನ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?