ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Polls) ಹಿನ್ನೆಲೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಬುಧವಾರ ಎನ್‌ಸಿಪಿ (ಎಪಿ) 38 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಬಾರಾಮತಿ ಕ್ಷೇತ್ರದಿಂದ ಶರದ್ ಪವಾರ್ (Sharad Pawar) ಬಣದಿಂದ ಸ್ಪರ್ಧಿಸಿರುವ ತಮ್ಮ ಸೋದರಳಿಯ ಯುಗೇಂದ್ರ ಪವಾರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಿದ್ದರಾಮಯ್ಯ
ಅಜಿತ್ ಪವಾರ್ ಅವರು ಆಡಳಿತ ಪಾಳಯಕ್ಕೆ ಸೇರಿದಾಗ ಅವರ ಪರವಾಗಿದ್ದ ಸಚಿವರು ಸೇರಿದಂತೆ 26 ಹಾಲಿ ಶಾಸಕರಿಗೆ ಮತ್ತೆ ಮಣೆ ಹಾಕಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಂದಿದ್ದ ಹಾಲಿ ಶಾಸಕರಾದ ಸುಲ್ಭಾ ಖೋಡ್ಕೆ (ಅಮರಾವತಿ) ಮತ್ತು ಹಿರಾಮನ್ ಖೋಸ್ಕರ್ (ಇಗತ್‌ಪುರಿ) ಅವರು ಎನ್‌ಸಿಪಿಯಿಂದ ಸ್ಪರ್ಧಿಸಲಿದ್ದಾರೆ.
ನವಾಪುರ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ದಿವಂಗತ ಮಾಣಿಕ್ರಾವ್ ಗಾವಿತ್ ಅವರ ಪುತ್ರ ಭರತ್ ಗವಿತ್ ಕಣಕ್ಕಿಳಿದಿದ್ದಾರೆ. ರಾಜ್ಯ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರನ್ನು ದಿಂಡೋರಿಯಿಂದ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಛಗನ್ ಭುಜಬಲ್ ಅವರನ್ನು ಯೆಯೋಲಾದಿಂದ ಕಣಕ್ಕಿಳಿಸಲಾಗಿದೆ. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ
ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಸಚಿವ ರಾಜ್‌ಕುಮಾರ್ ಬಡೋಲೆ ಅವರಿಗೆ ಅರ್ಜುನಿ-ಮೋರ್ಗಾಂವ್‌ನಿಂದ ಟಿಕೆಟ್ ನೀಡಲಾಗಿದೆ.