ತಾಳೆಗರಿಯಲ್ಲಿ ಗದಾಯುದ್ಧ ಬರೆಯಲು ಮುಂದಾದ ಸಂಗಮೇಶ ಕಲ್ಯಾಣಿ

Public TV
1 Min Read
Gadayuddha Palm Leaf Script Sangamesh Kalyani 2

ಬಾಗಲಕೋಟೆ: ಮುಧೋಳದ ಹಿರಿಯ ಸಂಶೋಧಕ, ಮೂಡಿ ಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ (Sangamesh-Kalyani) ಅವರು ರನ್ನನ ಗದಾಯುದ್ಧವನ್ನು (Gadayuddha) ತಾಳೆಗರಿಯಲ್ಲಿ ಬರೆಯಲು ಮುಂದಾಗಿದ್ದಾರೆ.

ರನ್ನ ಗದಾಯುದ್ಧವನ್ನು (Ranna Gadayuddha) ಪದ್ಯ ರೂಪದಲ್ಲಿ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ. ತಿನಂಶ್ರೀ ಅವರು ಹಳೆಗನ್ನಡದಲ್ಲಿ ಗದಾಯುದ್ಧವನ್ನು ದಾಖಲಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿರುವುದನ್ನು ಆಯ್ಕೆ ಮಾಡಿಕೊಂಡು ಅವತರಣಿಕೆ ಸಹಿತ ಆಯ್ದ 300 ಪದ್ಯಗಳನ್ನು ತಾಳೆಗರಿಯಲ್ಲಿ ಬರೆಯಲಾಗುತ್ತದೆ.

Gadayuddha Palm Leaf Script Sangamesh Kalyani 1

ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ದೊರೆಯುವ ತಾಳೆಗರಿ (Palm Leaf Script ) ಆಮದು ಮಾಡಿಕೊಂಡು ತಾಮ್ರದ ಕಡ್ಡಿಯಿಂದ ಪದ್ಯಗಳನ್ನು ಬರೆಯಲಾಗುತ್ತದೆ. ಅಂದಾಜು 80 ರಿಂದ 90 ಸಾವಿರ ರೂ. ವೆಚ್ಚದಲ್ಲಿ ಒಂದು ವರ್ಷದಲ್ಲಿ ಈ ಕೆಲಸ ಪೂರ್ಣಗೊಳಿಸುವ ಗುರಿಯನ್ನು ಹಾಕಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ – ಸಿಪಿವೈ ಪಕ್ಷ ಸೇರುವ ಮುನ್ಸೂಚನೆ ಕೊಟ್ಟ ಸಿಎಂ

Gadayuddha Palm Leaf Script Sangamesh Kalyani 3

ಸ್ಮರಣಿಕೆಯಲ್ಲಿ ಗದಾಯುದ್ಧ ಕೆತ್ತನೆ
ಇಂದು ಮದುವೆ ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಮಾರಂಭದಲ್ಲಿ ಊಡುಗೊರೆ ನೀಡುವುದು ಸಾಮಾನ್ಯ. ಈಗ ಡಾ.ಸಂಗಮೇಶ ಕಲ್ಯಾಣಿ ಅವರು ಸ್ಮರಣಿಕೆಯಲ್ಲಿ ಗದಾಯುದ್ಧವನ್ನು ಕೆತ್ತನೆ ಮಾಡಿ ವಿತರಣೆ ಮಾಡಲು ಮುಂದಾಗಿದ್ದಾರೆ.

 

Share This Article