ಧಾರವಾಡ: ಶಿಗ್ಗಾಂವಿ, ಸಂಡೂರು (Sandur) ಹಾಗೂ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದಲ್ಲಿ 9Dharawada) ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಭಾನುವಾರ ಸಿಎಂ ಅವರು ಸಭೆ ಕರೆದು ಸಚಿವರು ಹಾಗೂ ಡಿಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ನಾವೆಲ್ಲ ನಮ್ಮ ಅಭಿಪ್ರಾಯ ಮಂಡನೆ ಮಾಡಿದ್ದೇವೆ. ಇವತ್ತು ಅಥವಾ ನಾಳೆ ಹೈಕಮಾಂಡ್‌ನಿಂದ ಅಂತಿಮ ತೀರ್ಮಾನ ಬರಲಿದೆ. ಶಿಗ್ಗಾಂವಿ ಟಿಕೆಟ್ ಹಂಚಿಕೆಯಲ್ಲೂ ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೊನೆಯದಾಗಿ ಹೈಕಮಾಂಡ್‌ನಿಂದ ಏನು ತೀರ್ಮಾನ ಬರುತ್ತದೋ ಅದುವೇ ಅಂತಿಮ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕ
ಸಿ.ಪಿ.ಯೋಗೇಶ್ವರ್ ( C P Yogeshwar) ಅವರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಭಾಗದಲ್ಲಿ ನನಗೆ ಜಾಸ್ತಿ ಮಾಹಿತಿ ಇಲ್ಲ. ನಮ್ಮ ಅಧ್ಯಕ್ಷರಿಗೆ ಹಾಗೂ ಸಿಎಂಗೆ ಅಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೈಕಮಾಂಡ್ ಜೊತೆ ಮಾತನಾಡಿ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನನಗೆ ಹೆಚ್ಚಿಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್ ಎಂದ ರಾಹುಲ್‌ಗೆ ರಿಲೀಫ್ – ಅರ್ಜಿ ವಜಾ, 25 ಸಾವಿರ ದಂಡ
ಈ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ( Channapatna) ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವೇ ಲೀಡ್ ಆಗಿದ್ದೇವೆ. ಶಿಗ್ಗಾಂವಿಯಲ್ಲೂ ಲೀಡ್ ಆಗಿದ್ದೇವೆ. ಸಂಡೂರಿನಲ್ಲೂ ಸಹ ಎರಡು ಬಾರಿ ಲೀಡ್ ಆಗಿದ್ದೇವೆ. ಹೀಗಾಗಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉಗ್ರದಾಳಿಯ ಹೊಣೆ ಹೊತ್ತ ಪಾಕ್ ಟಿಆರ್‌ಎಫ್ ಸಂಘಟನೆ