ಮುಡಾ ಕೇಸ್‌ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ

Public TV
4 Min Read
Chalavadi Narayanaswamy

ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Case) ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್ (Byrathi Suresh) ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಬೈರತಿ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣದಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಮುಡಾ ದಾಖಲೆ ಕದ್ದಿರಬಹುದು ಎಂದು ಆರೋಪ ಮಾಡಿದ್ದರು. ಇದಕ್ಕೆ ಇಂದು ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

Byrathi Suresh

ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮುಡಾ ಕಚೇರಿ ಮೇಲೆ ಇ.ಡಿ ದಾಳಿ ಮಾಡಿದೆ. ದಾಖಲೆಗಳನ್ನು ಕಲೆ ಹಾಕುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕು ಎಂದು ಕೇಳಿದ್ದೆ. ಬೈರತಿ ಸುರೇಶ್ ಅವರು ಹೆಲಿಕಾಪ್ಟರ್‌ನಲ್ಲಿ ಹೋಗಿ ದಾಖಲೆ ಹೊತ್ತು ತಂದಿದ್ದರು ಎಂದು ಚರ್ಚೆ ಆಗುತ್ತಿತ್ತು. ಹೀಗಾಗಿ ಅವರನ್ನು ತನಿಖೆ ಮಾಡಬೇಕು ಅಂತ ಹೇಳಿದ್ದೆ. ಇದಕ್ಕೆ ನನ್ನನ್ನೇ ಸುರೇಶ್ ಕಳ್ಳ ಅಂದಿದ್ದಾರೆ. ಆದರೆ ನಿಜವಾದ ಕಳ್ಳ ನೀವು ಎಂದು ಕಿಡಿಕಾರಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ಬೇಲ್ ಸಿಕ್ಕರೂ ಆರೋಪಿ ರವಿಶಂಕರ್‌ಗೆ ಇಲ್ಲ ಬಿಡುಗಡೆ ಭಾಗ್ಯ

ಮುಡಾ ಕೇಸ್ ಹೊರಗೆ ಬಂದ ಕೂಡಲೇ ಹೆಲಿಕಾಪ್ಟರ್‌ನಲ್ಲಿ ಮುಡಾ ಕಚೇರಿಗೆ ಹೋಗಿದ್ದು ಸುರೇಶ್. ಅವತ್ತು ಅವರು ಹೆಲಿಕಾಪ್ಟರ್‌ನಲ್ಲಿ ದಾಖಲಾತಿ ತರದೇ ಇದ್ದರೆ ಈ ಕೇಸ್ ಇಷ್ಟು ಹೈಪ್ ಆಗುತ್ತಿರಲಿಲ್ಲ. ಸಿಎಂ ಅವರನ್ನು ಸಿಕ್ಕಿಸಿದ್ದು ಇದೇ ಸುರೇಶ್. ಶುಕ್ರವಾರ ಸುರೇಶ್ ಕುಮಾರಸ್ವಾಮಿ ಫೈಲ್ ತಂದಿರಬಹುದು ಎಂದು ಆರೋಪಿಸಿದರು. ಇದನ್ನೂ ಓದಿ: ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ

ಛಲವಾದಿ ನಾರಾಯಣಸ್ವಾಮಿ ದಾಖಲಾತಿ ಕದ್ದಿದ್ದಾರೆ ಎಂದು ಹೇಳಿದ್ದಾರೆ. ಮಿಸ್ಟರ್ ಸುರೇಶ್ ಅವರೇ, ನೀವು ಮಂತ್ರಿ ಆಗೋಕೆ ಯೋಗ್ಯರು ಅಲ್ಲ. ನಾನು ದಾಖಲಾತಿ ಕದ್ದಿದ್ದರೆ ನೀವು ಏನು ಕಡ್ಲೆಪುರಿ, ಚುರುಮುರಿ ತಿಂತಿದ್ರಾ? ನನ್ನ ಮೇಲೆ ದೂರು ಕೊಡಬೇಕಿತ್ತು. ನಾಲಿಗೆ ಹೇಗೆ ಹೋಗುತ್ತೆ ಅಂತ ಮಾತಾಡಬಾರದು. ನನ್ನನ್ನು ಕಳ್ಳ ಅಂತ ಹೇಳಿದ್ದೀರಿ. ಕುಮಾರಸ್ವಾಮಿ ಅವರನ್ನು ಯಾಕೆ ಕಳ್ಳ ಅಂದಿಲ್ಲ. ನಾನು ದಲಿತ ಸಮುದಾಯದವನು ಅಂತ ನನ್ನನ್ನು ಕಳ್ಳ ಅಂದ್ರಾ? ನಾನು ಏನು ಮಾತಾಡಲ್ಲ ಅಂತ ನನ್ನನ್ನ ಕಳ್ಳ ಅಂದ್ರಾ? ಸಮಯ ಬಂದಾಗ ನಮ್ಮ ಸಮುದಾಯದ ಜನ ನಿಮಗೆ ಉತ್ತರ ಕೊಡುತ್ತಾರೆ. ತಪ್ಪು ಮಾಡಿದ್ದು ನೀವು. ನೀವು ಕಳ್ಳ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ

Siddaramaiah Valmiki Jayanthi

ನಿಮಗೆ ತಾಕತ್ ಇದ್ದರೆ ನನ್ನ ಮೇಲೆ ಒಂದು ಕೇಸ್ ಹೇಳಿ ನೋಡೋಣ. ಬಿರಿಯಾನಿ ಅಂಗಡಿ ಇಟ್ಟಿದ್ದಾನೆ ಛಲವಾದಿ ನಾರಾಯಣಸ್ವಾಮಿ ಅಂತ ನಿಮಗೆ ಹೊಟ್ಟೆ ಉರಿ. ನಾನು ಯಾವುದೇ ಬಿರಿಯಾನಿ ಅಂಗಡಿ ಇಟ್ಟಿಲ್ಲ. ದಲಿತರು ಅಂಗಡಿ ಇಟ್ಟರೆ ನೀವು ತಿನ್ನುತ್ತೀರಾ? ಹಾರಿಕೆ ಉತ್ತರ ನೀಡೋದು, ಅಪಾದನೆ ಮಾಡೋದು ಕಾಂಗ್ರೆಸ್‌ಗೆ ಒಂದು ಚಟ ಆಗಿದೆ. ಮುಡಾ ಫೈಲ್ ಕದ್ದು ತಂದಿದ್ದು ನೀವು. ವೈಟ್ನರ್ ಹಾಕಿದ್ದು ಯಾರು? ನೀವು ಕದ್ದು ಆಸ್ತಿ ಮಾಡಿರೋದು ಪಟ್ಟಿ ಹೇಳಲಾ? ನೂರಾರು ಇದೆ. ನನನ್ನು ಕೆಣಕಿದರೆ ನಾನು ಸುಮ್ಮನೆ ಇರಲ್ಲ. ನಾನು ಯಾರಿಗೂ ಜಗ್ಗೋನು ಅಲ್ಲ, ಬಗ್ಗೋದು ಇಲ್ಲ. ನೀವು ಯಾರಿಗೂ ಜಗ್ಗಲ್ಲ ಅಂದರೆ ಯಾಕೆ ಸೈಟ್ ವಾಪಸ್ ಕೊಟ್ರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾಗಸಂಧ್ರ to ಮಾದಾವರ ಮೆಟ್ರೋ ಉದ್ಘಾಟನೆ ಸಿದ್ಧತೆಗೆ ಬಿಬಿಎಂಪಿಗೆ ಪತ್ರ

ಬಿಜೆಪಿ ಅವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲ್ಲ ಎನ್ನುತ್ತಾರೆ. ನಾವು ಯಾಕೆ ಬಟ್ಟೆ ಹರಿದುಕೊಳ್ಳೋಣ. ನಿಮ್ಮ ಬಟ್ಟೆ ಹರಿಯುತ್ತೇವೆ. ಈ ಸರ್ಕಾರದಲ್ಲಿರುವ ಸಚಿವರು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಚಿವರು ಜಾಮೀನಿನ ಮೇಲೆ ಹೊರಗೆ ಬರುತ್ತಿದ್ದಾರೆ. ಸುರೇಶ್ ಅವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಾನು ಕಳ್ಳ ಅಲ್ಲ. ನಿಜವಾದ ಕಳ್ಳ ಬೈರತಿ ಸುರೇಶ್. ಸುರೇಶ್ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ದೀಪಾವಳಿ, ಛತ್ ಪೂಜೆಗೂ ಮುನ್ನವೇ ದೆಹಲಿಯಲ್ಲಿ ಮಾಲಿನ್ಯ – ಯಮುನಾ ನದಿಯಲ್ಲಿ ದಪ್ಪ ನೊರೆ, ಆತಂಕದಲ್ಲಿ ಜನರು

ಇ.ಡಿ ಕೇಳಿದಾಗ ತಕ್ಷಣ ದಾಖಲೆ ಕೊಡಬೇಕಿತ್ತು. 3 ಸಾರಿ ನೋಟಿಸ್ ಬಂದರೂ ಯಾಕೆ ದಾಖಲೆ ಕೊಡಲಿಲ್ಲ. ನೀವು ಸಿಎಂ ಅವರು ಮಾನಸಪುತ್ರ. ಸಿದ್ದರಾಮಯ್ಯ ಬೇನಾಮಿ ಸುರೇಶ್ ಎಂದು ಎಲ್ಲರೂ ಹೇಳುತ್ತಾರೆ. ನೀವು ಏನು ಕದ್ದಿದ್ದೀರಿ ಎಂದು ನಾನು ಮುಂದೆ ಸಾಬೀತು ಮಾಡುತ್ತೇನೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಆರೋಪಿಗಳ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಿ: ಇ.ಡಿಗೆ ಅಶೋಕ್ ಮನವಿ

ಮುಡಾ ಕೇಸ್‌ನಲ್ಲಿ ಸಹಾಯ ಮಾಡಿದ್ದಕ್ಕೆ ಕುಮಾರ್ ನಾಯಕ್ ಅವರಿಗೆ ಟಿಕೆಟ್ ಕೊಟ್ಟು ಸಿದ್ದರಾಮಯ್ಯ ಋಣ ತೀರಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಹೋಗಿದೆ ಎಂದು ಇ.ಡಿ ಹೇಳಿದೆ. ಹೀಗಾಗಿ ತುಕಾರಾಂ, ಕುಮಾರ್ ನಾಯಕ್ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಉತ್ತರ ಕುಮಾರ ಇದ್ದಂತೆ: ಈಶ್ವರಪ್ಪ ಲೇವಡಿ

Share This Article