ಬೆಂಗಳೂರು: ಯುವಕರ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ಮಾಡಿರುವ ಘಟನೆ ನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ (Hosahalli Metro Statin) ಬಳಿ ನಡೆದಿದೆ.
ಶುಕ್ರವಾರ ರಾತ್ರಿ ಮೆಟ್ರೋ ಸ್ಟೇಷನ್ ಬಳಿ ಮಾತನಾಡುತ್ತಾ ಕುಳಿತಿದ್ದ ಯುವಕರ ಮೇಲೆ ಹಲ್ಲೆ ನಡೆದಿದೆ.ಇದನ್ನೂ ಓದಿ:ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್
ಯುವತಿಯರ ಜೊತೆ ಯುವಕರು ಮಾತನಾಡುತ್ತಾ ಕುಳಿತಿದ್ದರು. ಮಾತನಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಪುಂಡರ ಗ್ಯಾಂಗ್‌ವೊಂದು ಬಂದಿದ್ದು, ಕುಳಿತಿದ್ದ ಯುವಕರಿಗೆ ಚಮಕ್ ನೀಡಿದ್ದಾರೆ. ಇದರಿಂದಾಗಿ ಯುವಕರು ಹಾಗೂ ಬೈಕ್‌ನವರ ಮಧ್ಯೆ ಗಲಾಟೆ ನಡೆದಿದೆ.
ಗಲಾಟ ವೇಳೆ ಕುಳಿತಿದ್ದ ಯುವಕರ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಹಾಕಿ ಹಲ್ಲೆ ಮಾಡಿದ್ದಾರೆ. ರಾತ್ರಿ 10:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (Govindaraja Nagar Police Station) ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ:Public TV Impact | ಕಲಬುರಗಿ ಸೆಂಟ್ರಲ್ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು