ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಕೆಲಸದ ನಡುವೆ ಹುಟ್ಟೂರು ಮುಂಬೈಗೆ ಬಂದಿರುವ ನಟಿ ಹೊಸ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ:ಅಕ್ಷಯ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ ಆರ್.ಮಾಧವನ್, ಅನನ್ಯಾ ಪಾಂಡೆ ಸಾಥ್
ಲೈಟ್ ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ನಟಿಯ ನಯಾ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಸುಮ್ಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದ ಅಮೂಲ್ಯ ಅಣ್ಣ ದೀಪಕ್ ಅಂತ್ಯಕ್ರಿಯೆ
ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಇದೀಗ ‘ಪಾನಿ’ (Paani) ಎಂಬ ಮರಾಠಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರ ಇಂದು (ಅ.18) ರಿಲೀಸ್ ಆಗಿದೆ.
ಪ್ರಿಯಾಂಕಾ ಅವರ ಬಾಲಿವುಡ್ ಚಿತ್ರಕ್ಕಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇತ್ತೀಚೆಗೆ ಸಮಂತಾ (Samantha), ವರುಣ್ (Varun Dhawan) ನಟಿಸಿರುವ ‘ಸಿಟಾಡೆಲ್ ಹನಿ ಬನಿ’ (Citadel Honey Bunny) ವೆಬ್ ಸಿರೀಸ್ ಪ್ರಚಾರಕ್ಕೂ ಪ್ರಿಯಾಂಕಾ ಕೈಜೋಡಿಸಿದ್ದರು. ಪ್ರಿಯಾಂಕಾ ನಟಿಸಿದ್ದ ಸಿಟಾಡೆಲ್ ಪಾತ್ರವನ್ನೇ ಹಿಂದಿಯಲ್ಲಿ ಸಮಂತಾ ನಟಿಸಿದ್ದಾರೆ.
ಅಂದಹಾಗೆ, ಅಮೆರಿಕನ್ ಸಿಂಗರ್ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ 2018ರಲ್ಲಿ ಮದುವೆಯಾದರು. ಪತಿ ಜೊತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮುದ್ದಾದ ಹೆಣ್ಣು ಮಗುವನ್ನು ಈ ಜೋಡಿ ಬರಮಾಡಿಕೊಂಡರು.