– ಪರಪ್ಪನ ಅಗ್ರಹಾರ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ
ಬಳ್ಳಾರಿ: ನಾನು ತಪ್ಪೇ ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪ. ಸಣ್ಣ ದೋಷ ಇಲ್ಲದೇ ಹೊರ ಬರುವೆ ಎಂದು ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ (Valmiki Jayanti) ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಕಣ್ಣೀರು ( B Nagendra) ಹಾಕಿದ್ದಾರೆ.
ಬಳ್ಳಾರಿಯಲ್ಲಿ (Ballari) ನಡೆದ ವಾಲ್ಮೀಕಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾವುದೇ ತಪ್ಪು ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪವಾಗಿದೆ. ಸಣ್ಣ ದೋಷ ಇಲ್ಲದೇ ಇದರಿಂದ ಹೊರ ಬರುತ್ತೇನೆ. ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ ಅಂತ ನಿಖಿಲ್ ನನ್ನ ಬಳಿ ಹೇಳಿಕೊಂಡಿದ್ದಾರೆ: ಸಾರಾ ಮಹೇಶ್
ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿದ್ದೇನೆ ಎಂದು ನಂಬಿದ್ದಾರೆ. ನಾನು ಯಾರನ್ನೂ ನಂಬಿಸಬೇಕಿಲ್ಲ, ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ನಾನು ಹಲವಾರು ಬಾರಿ ಜೈಲು ನೋಡಿದ್ದೇನೆ. ಇಂತಹ ಜೈಲಿಗೆ ಯಾವುದಕ್ಕೂ ನಾನು ಹೆದರಲಿಲ್ಲ. ಆದ್ರೆ ಒಂದು ಸುಳ್ಳು ಇಟ್ಟುಕೊಂಡು ಬಂದು ಇವರು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀವೆಲ್ಲಾ ನೋಡುತ್ತಿರಿ, ಹಗರಣ ಎಂದು ಬಿಜೆಪಿಯಲ್ಲಿ (BJP) ಯಾರೆಲ್ಲಾ ಮಾತಾಡುತ್ತಿದ್ದಾರೆ ಅವರೆಲ್ಲರ ಹೆಸರನ್ನು ಜೈಲಿನ ಗೋಡೆಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲುಪಾಲಾಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ| ಮಳೆ ಅವಾಂತರ- ಕೊಚ್ಚಿ ಹೋಯ್ತು ನಿರ್ಮಾಣ ಹಂತದಲ್ಲಿದ್ದ ರಸ್ತೆ
ವಾಲ್ಮೀಕಿ ಸಮುದಾಯದ ಹುಡುಗನಾಗಿ ವಾಲ್ಮೀಕಿ ಜಯಂತಿ ದಿನ ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತನಾಡುವುದಕ್ಕೆ ಬೇಸರ ಆಗುತ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲ ಬಿಜೆಪಿಯ ಕುತಂತ್ರವಾಗಿದೆ. ಸಿಬಿಐ, ಇಡಿ ಬಳಸಿ ಸರ್ಕಾರ ಅಸ್ಥಿರ ಮಾಡುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ರಕರಣದಿಂದ ಸಂಪೂರ್ಣ ಮುಕ್ತನಾಗುತ್ತೇನೆ ಎಂದರು. ಇದನ್ನೂ ಓದಿ: Lokmanya Tilak Express | ಇಂಜಿನ್ ಸೇರಿ ಹಳಿತಪ್ಪಿದ 8 ಬೋಗಿಗಳು
ಜನಾರ್ದನ ರೆಡ್ಡಿ ಬಿಜೆಪಿಗೆ ಭಯ ಬಿದ್ದು ಕೋಮುವಾದಿ ಪಕ್ಷಕ್ಕೆ ಹೋಗಿದ್ದಾರೆ. ಇಡಿ, ಸಿಬಿಐ ಭಯಕ್ಕೆ ರೆಡ್ಡಿ ಬಿಜೆಪಿ ಪಕ್ಷ ಸೇರಿದ್ದಾರೆ. ಅವರು ಕೆಆರ್‌ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ಧ ಎಷ್ಟು ಆರೋಪ ಮಾಡಿದ್ರು? ನಾನು ಕಳೆದ ಮೂರು ತಿಂಗಳಲ್ಲಿ ಆದ ಇಡಿ ಕಿರುಕುಳವನ್ನ ಹೇಳಿಕೊಳ್ಳುವ ಸ್ವಾತಂತ್ರ‍್ಯ ಇದೆ, ಮಾತಾಡಿದ್ದೇನೆ. ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ ಅರಮನೆ ಮಾಡಿದ್ರು ಕಾಂಗ್ರೆಸ್ ಗೆಲುವು ಫಿಕ್ಸ್. ಜನಾರ್ದನ ರೆಡ್ಡಿ (Janardhan Reddy) ಬಳ್ಳಾರಿಗೆ ಬಂದಿರೋದು ನಮ್ಮ ಪಕ್ಷದ ಮೇಲೆ ಯಾವ ಪರಿಣಾಮ ಬೀರಲ್ಲ ಎಂದು ನುಡಿದರು. ಇದನ್ನೂ ಓದಿ: ಎರಡನೇ ಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ
ಯುಪಿಎ ಸರ್ಕಾರ ಇದ್ದಾಗ ನಾಗೇಂದ್ರ ಜೈಲಿಗೆ ಹೋಗಿದ್ದರು ಎನ್ನುವ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಆಗ ನಾವು ಅವರ ಜೊತೆ ಇದ್ದಾಗ ನಾನು ಒಳ್ಳೆಯವನಿದ್ದೆ, ಈಗ ಪಕ್ಷ ಬದಲಾದಕೂಡಲೇ ನಾಗೇಂದ್ರ ಕೆಟ್ಟವನು ಆಗ್ತಾನಾ? ಜನಾರ್ದನ ರೆಡ್ಡಿ ಅವರಿಗೆ ಸ್ವಲ್ಪ ಆತ್ಮ ಸಾಕ್ಷಿ ಇದ್ರೆ ನೋಡಿಕೊಳ್ಳಲಿ. ಹೈ ವೋಲ್ಟೇಜ್ ಅಲ್ಲ, ಲಕ್ಷ ವೋಲ್ಟೆಜ್ ಇದ್ರೂ ನಾವೇ ಸಂಡೂರು ಗೆಲ್ಲೋದು. ಯಾರಿಗೆ ಎಷ್ಟು ವೋಲ್ಟೇಜ್ ಇದೆ ಎಂದು ಚುನಾವಣೆ ಬಳಿಕ ಗೊತ್ತಾಗಲಿದೆ. ಚುನಾವಣೆಯಲ್ಲಿ ತಂತ್ರ, ಪ್ರತಿ ತಂತ್ರ ಅಲ್ಲ ನಾವು ರಣ ತಂತ್ರ ಮಾಡುತ್ತೇವೆ. ಜನಾರ್ದನ ರೆಡ್ಡಿ ಅಲ್ಲ ಯಾರೇ ಬಂದರೂ ಸಂಡೂರಲ್ಲಿ ಕಾಂಗ್ರೆಸ್ ಗೆಲುವು ಫಿಕ್ಸ್ ಎಂದು ಹರಿಹಾಯ್ದರು. ಇದನ್ನೂ ಓದಿ: ಗಮನಿಸಿ, ರೈಲ್ವೇ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿ 120 ದಿನದಿಂದ 60 ದಿನಕ್ಕೆ ಕಡಿತ