ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ (Emergency Film) ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಪ್ರಮಾಣಪತ್ರ (CBFC) ವಿತರಿಸಿದೆ. ಈ ಮೂಲಕ ಕಂಗನಾ ನಟನೆಯ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೊ ಲಾಂಚ್ ಮಾಡಿದ ನಿರ್ಮಾಪಕ ಭಾ.ಮ ಹರೀಶ್
‘ಎಮರ್ಜೆನ್ಸಿ’ ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವ ಕುರಿತು ಖುದ್ದು ಕಂಗನಾ (Kangana Ranaut) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮ ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸ್ವೀಕರಿಸಿದ್ದೇವೆ ಎಂದು ತಿಳಿಸಲು ಖುಷಿಯಾಗುತ್ತಿದೆ. ಶೀಘ್ರದಲ್ಲಿಯೇ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡುತ್ತೇವೆ. ನಿಮ್ಮೆಲ್ಲರ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ನಟಿ.
We are glad to announce we have received the censor certificate for our movie Emergency, we will be announcing the release date soon. Thank you for your patience and support ????????
— Kangana Ranaut (@KanganaTeam) October 17, 2024
ಅಂದಹಾಗೆ, ಎಮರ್ಜೆನ್ಸಿ ಸಿನಿಮಾ ಜೂನ್‌ನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಸದ್ಯದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ ಎಂದು ನಟಿ ಗುಡ್ ನ್ಯೂಸ್ ನೀಡಿದ್ದಾರೆ.
ಇನ್ನೂ ಇಂದಿರಾ ಗಾಂಧಿ (Indira Gandhi) ಜೀವನ ಆಧರಿಸಿದ ಸಿನಿಮಾ ಇದಾಗಿದೆ. ಕಂಗನಾ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರೇ ನಟಿಸುವುದರ ಜೊತೆ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದಾರೆ.