ಮೈಸೂರು: 2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ 1,400ಕ್ಕೂ ಹೆಚ್ಚು ನಿವೇಶನಗಳನ್ನ (MUDA Sites) ಜಪ್ತಿ ಮಾಡುವಂತೆ ಸಿಎಂಗೆ ಮನವಿ ಮಾಡಿರುವುದಾಗಿ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ (TS Srivatsa) ತಿಳಿಸಿದ್ದಾರೆ.
ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಕೊಟ್ಟಿರುವ ಎಲ್ಲಾ ನಿವೇಶನಗಳನ್ನ ಜಪ್ತಿ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇನೆ. ಜೊತೆಗೆ 50:50 ಅನುಪಾತದಲ್ಲಿ ತೆಗೆದುಕೊಂಡಿರುವ ಸೈಟು ಪರಬಾರೆ ಆಗುತ್ತಿದೆ ಎಂಬ ಮಾಹಿತಿ ಇದೆ. ಇದಕ್ಕೆ ಕಡಿವಾಣ ಹಾಕಲು ಸಬ್‌ರಿಜಿಸ್ಟರ್ ಕಚೇರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮುಡಾ ಪ್ರಕರಣದಲ್ಲಿ ತಾಂತ್ರಿಕ ಸಮಿತಿ ಕೊಟ್ಟಿರುವ ವರದಿ ಬಗ್ಗೆ ತನಿಖೆಯಾಗಿಲ್ಲ. ಮರೀಗೌಡ ಅವರೂ ರಾಜೀನಾಮೆ ಕೊಟ್ಟಿದ್ದಾರೆ. ಇಬ್ಬರು ಮುಡಾ ಆಯುಕ್ತರು ಬಾಕಿಯಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ. ಅದಕ್ಕೆ ಸಿಎಂ ತನಿಖೆ ನಡೆಯುತ್ತಿದೆಯಲ್ಲಾ ನೋಡೋಣ ಎಂದು ಪ್ರತಿಕ್ರಿಯಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸುಳ್ಳು ಆಪಾದನೆ ಮಾಡ್ತಿದ್ದಾರೆ, ನಾವು ಸಿಎಂ ಜೊತೆ ನಿಲ್ಲಬೇಕು: ಕೆಎನ್ ರಾಜಣ್ಣ
ಮುಡಾದಲ್ಲಿ ಸುಮಾರು 1,400ಕ್ಕೂ ಹೆಚ್ಚು ನಿವೇಶನಗಳು 50:50 ಅನುಪಾತದಲ್ಲಿ ಹಂಚಿಕೆ ಆಗಿವೆ. ಅವೆಲ್ಲವನ್ನೂ ಜಪ್ತಿ ಮಾಡಿ ತನಿಖೆ ನಡೆಸಬೇಕು. ಅರ್ಹರಿದ್ದರೆ ಅವರಿಗೆ ಸೈಟು ನೀಡಲಿ, ಉಳಿದವನ್ನು ಜಪ್ತಿ ಮಾಡಲಿ. ಜೊತೆಗೆ ಕೆಲವರು ಸೈಟು ನಮ್ಮ ಬಳಿಯಿದ್ದರೆ ತೊಂದರೆ ಅಂತ ಬೇರೆಯವರಿಗೆ ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಅದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಚನ್ನಪಟ್ಟಣ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು: ಸಿಪಿವೈ ಪರ ಮುನಿಸ್ವಾಮಿ ಬ್ಯಾಟಿಂಗ್
ಮುಡಾದಲ್ಲಿ ಹಂಚಿಕೆ ಆಗಿರುವ 4,875 ಸೈಟುಗಳ ಬಗ್ಗೆಯೂ ಹೋರಾಟ ಮಾಡುತ್ತಿದ್ದೇವೆ. ಅದರಲ್ಲಿ 14 ಸೈಟು ವಾಪಸ್ ಬಂದಿದೆ. ಇದರೊಂದಿಗೆ ಬದಲಿ ನಿವೇಶನಗಳಲ್ಲೂ ವಂಚನೆ ಆಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಳ ಸಮುದಾಯದವರು ಸಂಸ್ಕೃತ ಕಲಿತು ಕಾವ್ಯ ರಚಿಸಿದರೆ ಅಂಥವರ ಬಗ್ಗೆ ಕಥೆ ಕಟ್ಟುತ್ತಾರೆ: ಸಿದ್ದರಾಮಯ್ಯ