ಚಿತ್ರದುರ್ಗ| ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ

Public TV
1 Min Read
Chitradurga Boy Death Stary Dog Attack

ಚಿತ್ರದುರ್ಗ: ಬೀದಿ ನಾಯಿಗಳ ದಾಳಿಗೆ (Stray Dogs Attack) ಬಾಲಕ ಬಲಿಯಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು (Molakalmuru) ತಾಲೂಕಿನ ರಾಂಪುರ (Rampura) ಗ್ರಾಮದಲ್ಲಿ ನಡೆದಿದೆ.

ರಾಂಪುರ ಗ್ರಾಮದ ಮಿಥುನ್(11) ಮೃತ ಬಾಲಕ. ಟ್ಯೂಷನ್‌ಗೆ ತೆರಳುವ ವೇಳೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿವೆ. ಗುಂಪಾಗಿ ಅಟ್ಯಾಕ್ ಮಾಡಿರುವ ಬೀದಿ ನಾಯಿಗಳು ಬಾಲಕನ ತಲೆ, ಕೆನ್ನೆ ಹಾಗೂ ಮೈಯೆಲ್ಲಾ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಆಟೋ ಚಾಲಕ ರಾಜಪ್ಪ ಬಾಲಕನ ರಕ್ಷಣೆಗೆ ಮುಂದಾಗಿದ್ದು, ಗಾಯಾಳು ಬಾಲಕ ಮಿಥುನ್‌ಗೆ ರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ಸೈಟ್ ಸಿದ್ದಪ್ಪನವರೇ, ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? – ಜೆಡಿಎಸ್ ಟೀಕೆ

ಬಾಲಕನ ಸ್ಥಿತಿ ಗಂಭೀರವಾದ ಹಿನ್ನೆಲೆ ಆತನನ್ನು ಬಳ್ಳಾರಿ ವಿಮ್ಸ್‌ಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮಿಥುನ್ ಸಾವಿಗೀಡಾಗಿದ್ದಾನೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ – ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ

Share This Article