ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!

Public TV
2 Min Read
Team India 1

ಹೈದರಾಬಾದ್‌: ಬಾಂಗ್ಲಾ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ (Team India) ಹಲವು ದಾಖಲೆಗಳನ್ನು ನುಚ್ಚುನೂರು ಮಾಡಿತು.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್‌ 12) ನಡೆದ ಪಂದ್ಯವು ನಿಜಕ್ಕೂ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಭಾರತದ ಬ್ಯಾಟರ್‌ಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ ಆದವು. ಮೊದಲ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿದ ಸಂಜು ಸ್ಯಾಮ್ಸನ್‌‌ (Sanju Samson), ಸಿಕ್ಸರ್, ಬೌಂಡರಿಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಈ ಮೂಲಕ ಟಿ20 ಕ್ರಿಕೆಟ್‌ ಶತಕ ಸಿಡಿಸಿದ ಮೊದಲ ವಿಕೆಟ್‌ ಕೀಪರ್‌ ಎನಿಸಿಕೊಂಡರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಸಹ ಎನಿಸಿಕೊಂಡರು.

ವಿಶ್ವದ 2ನೇ ಗರಿಷ್ಠ ರನ್‌:
20 ಓವರ್‌ಗಳಲ್ಲಿ 297 ರನ್‌ ಗಳಿಸಿದ ಭಾರತ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (T20I Cricket) ಗಳಿಸಿದ 2ನೇ ಗರಿಷ್ಠ ಸ್ಕೋರ್‌ ಆಯಿತು. 2023ರ ಏಷ್ಯನ್‌ ಗೇಮ್ಸ್‌ನಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ 314 ರನ್‌ ಗಳಿಸಿರುವುದು ಈವರೆಗಿನ ದಾಖಲೆ. ಇದನ್ನೂ ಓದಿ: 6,6,6,6,6: ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ ಸ್ಯಾಮ್ಸನ್‌

Sanju Samson

ಅಲ್ಲದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ 10 ಓವರ್‌ಗಳಲ್ಲಿ ಅತಿಹೆಚ್ಚು ರನ್‌ ಗಳಿಸಿದ, ಅತಿವೇಗವಾಗಿ 100, 150, 200, 250 ರನ್‌ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಜೊತೆಗೆ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಡಿಸಿದ ಖ್ಯಾತಿಯನ್ನೂ ತನ್ನದಾಗಿಸಿಕೊಂಡಿತು.  ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ -‌ ಕಿಂಗ್‌ ಕೊಹ್ಲಿಗೆ ಸರಿಸಮನಾಗಿ ನಿಂತ ಮಿಸ್ಟರ್‌ 360

Suryakumar Yadav 2

ಕ್ಲೀನ್‌ಸ್ವೀಪ್‌ ಸಾಧನೆ:
ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಅತಿಹೆಚ್ಚು ಬಾರಿ ಕ್ಲೀನ್‌ ಸ್ವೀಪ್‌ ಸಣಿ ಗೆದ್ದ ಸಾಧನೆಯೂ ಮಾಡಿತು. 34 ಸರಣಿಗಳ ಪೈಕಿ ಭಾರತ 10 ಸರಣಿಗಳನ್ನು ಕ್ಲೀನ್‌ ಸ್ವೀಪ್‌ ಮಾಡಿ ಭಾರತ ಅಗ್ರಸ್ಥಾನಲ್ಲಿದೆ. ಇನ್ನುಳಿದಂತೆ ಪಾಕಿಸ್ತಾನ (8), ಅಫ್ಘಾನಿಸ್ತಾನ (6), ಆಸ್ಟ್ರೇಲಿಯಾ (5), ಇಂಗ್ಲೆಂಡ್‌ (4) ಸರಣಿಗಳನ್ನು ಗೆದ್ದು ಕ್ರಮವಾಗಿ 2,3,4,5ನೇ ಸ್ಥಾನದಲ್ಲಿವೆ.  ಇದನ್ನೂ ಓದಿ: ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌

Share This Article