ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

Public TV
2 Min Read
Rare rain floods Sahara Desert dry lake filled for first time in 50 years 2

ರಬತ್: ಅಪರೂಪದದಲ್ಲಿ ಅಪರೂಪ ಎಂಬಂತೆ ಸಹರಾ ಮರಭೂಮಿಯಲ್ಲಿ (Sahara Desert) ಭಾರೀ ಮಳೆಯಾಗುತ್ತಿದ್ದು (Rain) 50 ವರ್ಷದ ನಂತರ ಕೆರೆಗಳು ಭರ್ತಿಯಾಗುತ್ತಿವೆ.

ಹೌದು. ಉತ್ತರ ಆಫ್ರಿಕಾದಲ್ಲಿ ವಿಸ್ತಾರವಾಗಿ ಹರಡಿರುವ ಸಹರಾ ಮರಭೂಮಿಯಲ್ಲಿ ಈಗ ದಿಢೀರ್‌ ಮಳೆಯಾಗುತ್ತಿದೆ.

ಆಗ್ನೇಯ ಮೊರಾಕ್ಕೊದಲ್ಲಿ (Morocco) ಎರಡು ದಿನಗಳ ಧಾರಾಕಾರ ಮಳೆಯ ನಂತರ ಸಹರಾ ಮರುಭೂಮಿಯ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಸೃಷ್ಟಿಯಾಗಿದೆ. ಮೊರಕ್ಕೊ  ರಾಜಧಾನಿ ರಬತ್‌ನ ದಕ್ಷಿಣಕ್ಕೆ 450 ಕಿಮೀ ದೂರದಲ್ಲಿರುವ ಟಗೌನೈಟ್ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Rare rain floods Sahara Desert dry lake filled for first time in 50 years 1

ಝಗೋರಾ ಮತ್ತು ಟಾಟಾ ನಡುವಿನ ಕೆರೆ ಕಳೆದ 50 ವರ್ಷಗಳಿಂದ ಖಾಲಿಯಾಗಿತ್ತು. ಆದರೆ ಈಗ ಈ ಕೆರೆ ಭರ್ತಿಯಾಗಿರುವುದು ನಾಸಾ ಸೆರೆ ಹಿಡಿದ ಚಿತ್ರಗಳಿಂದ ದೃಢಪಟ್ಟಿದೆ.  ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

ಇಷ್ಟು ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. 30-50 ವರ್ಷಗಳ ಹಿಂದೆ ಸ್ವಲ್ಪ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ:ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ದುಬೈನಲ್ಲಿ ಅರೆಸ್ಟ್‌

ಭಾರೀ ಮಳೆಯಿಂದ ಮೊರಕ್ಕೋದಲ್ಲಿ ಕಳೆದ ತಿಂಗಳು ನೆರೆ (Flood) ಸೃಷ್ಟಿಯಾಗಿ 18 ಮಂದಿ ಮೃತಪಟ್ಟಿದ್ದರು. ಆಗ್ನೇಯ ಭಾಗದಲ್ಲಿ ನಿರ್ಮಾಣವಾಗಿರುವ ಜಲಾಶಯಗಳು ಸೆಪ್ಟೆಂಬರ್‌ನಲ್ಲೇ ಭರ್ತಿಯಾಗಿದೆ ಎಂದು ವರದಿಯಾಗಿದೆ.

ಉತ್ತರ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಾದ್ಯಂತ 9 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸಹಾರಾ ಮರುಭೂಮಿಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ವಿಪರೀತ ಹವಾಮಾನ ಸಮಸ್ಯೆ ಎದುರಿಸುತ್ತಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಲ್ಲಿ ಬಿರುಗಾಳಿ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

 

Share This Article