ಚೆನ್ನೈ: ದೆಹಲಿ-ಚೆನ್ನೈ ನಡುವಿನ (Delhi-Chennai) ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ (IndiGo Flight) ಮಹಿಳೆಯೊಬ್ಬರಿಗೆ (Woman) ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ರಾಜೇಶ್ ಶರ್ಮಾ (45) ಎಂದು ಗುರುತಿಸಲಾಗಿದೆ. ಆರೋಪಿ ಮಾರ್ಬಲ್ ಟೈಲ್ಸ್ ಲೇಯರ್ ಆಗಿದ್ದಾನೆ. ಅಕ್ಟೋಬರ್ 9 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಹಿಳೆ ಜೈಪುರ ಮತ್ತು ದೆಹಲಿ ಪ್ರವಾಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಆಕೆಯ ಹಿಂದೆ ಕುಳಿತಿದ್ದ ಆರೋಪಿಯು ಹಾರಾಟದ ಸಮಯದಲ್ಲಿ ಅವಳನ್ನು ಅಸಭ್ಯವಾಗಿ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಇಂಡಿಗೋ ಏರ್‌ಲೈನ್ಸ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.