ದೆಹಲಿಯಲ್ಲಿ 2 ಸಾವಿರ ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

Public TV
2 Min Read
COCAINE DRUGS

ನವದೆಹಲಿ: ದೆಹಲಿಯಲ್ಲಿ (Delhi) 2 ಸಾವಿರ ಕೋಟಿ ರೂ. ಮೌಲ್ಯದ ಕೊಕೇನ್ (Cocaine)ವಶಕ್ಕೆ ಪಡೆಯಲಾಗಿದ್ದು, ಒಂದೇ ವಾರದಲ್ಲಿ ಎರಡನೇ ಭರ್ಜರಿ ಬೇಟೆ ಇದಾಗಿದೆ.

ಗುರುವಾರ ದೆಹಲಿ ಪೊಲೀಸರು 2 ಸಾವಿರ ಕೋಟಿ ರೂ. ಮೌಲ್ಯದ 200 ಕೆ.ಜಿ ಕೊಕೇನ್‌ನ್ನು ವಶಕ್ಕೆ ಪಡೆಯುವ ಮೂಲಕ ಬೃಹತ್ ಜಾಲವನ್ನು ಭೇದಿಸಿದ್ದಾರೆ.

ದೆಹಲಿ ಪೊಲೀಸರ (Delhi Police) ವಿಶೇಷ ತಂಡವು ಡ್ರಗ್ಸ್ ಪೂರೈಕೆದಾರನನ್ನು ಜಿಪಿಎಸ್ ಮೂಲಕ ರಮೇಶ ನಗರದಲ್ಲಿ ಪತ್ತೆ ಹಚ್ಚಿದ್ದಾರೆ. ಆದರೆ ಆರೋಪಿಗಳು ಲಂಡನ್‌ಗೆ ಪರಾರಿಯಾಗಿದ್ದು, ಇದು ಅದೇ ಸಿಂಡಿಕೇಟ್‌ನ ಭಾಗವಾಗಿದೆ. ಪೊಲೀಸರು ಪೂರೈಕೆದಾರನನ್ನು ಪತ್ತೆಹಚ್ಚುವಲ್ಲಿ ಯಶ್ವಸಿಯಾಗಿದ್ದು, 5,600 ಕೋಟಿ ರೂ. ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಒಂದು ವಾರದಲ್ಲೇ 7,500 ಕೋಟಿ ರೂ. ಮೌಲ್ಯದ 762 ಕೆ.ಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದು ದೇಶದಲ್ಲಿಯೇ ಸಾಗಾಟವಾದ ಅತಿ ಹೆಚ್ಚು ಡ್ರಗ್ಸ್ ಆಗಿದೆ.ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ

ದೆಹಲಿ ಪೊಲೀಸರ ಮಾಹಿತಿಯ ಪ್ರಕಾರ, ಜಸ್ಸಿ ಎಂದು ಕರೆಯಲ್ಪಡುವ ಜಿತೇಂದ್ರ ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪಂಜಾಬ್ ಅಮೃತಸರದ ವಿಮಾನ ನಿಲ್ದಾಣದ ಬಳಿ ಯುಕೆಗೆ ಪ್ರಯಾಣಿಸಲು ಮುಂದಾಗಿದ್ದಾಗ ಆತನನ್ನು ಬಂಧಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ನೆಟ್‌ವರ್ಕ್ನ್ನು ಹೊಂದಿದ್ದು, ದೇಶದಲ್ಲಿ ಸಂಘಟಿತ ಅಪರಾಧವಾಗಿದೆ.

ಕಳೆದ 17 ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದು, ಜಸ್ಸಿ ಪರಾರಿಯಾಗುವ ಪ್ರಯತ್ನದ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ಸಿಂಡಿಕೇಟ್ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಜಾಲವು ದೆಹಲಿ, ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದುಬೈಗೆ ಸಂಪರ್ಕವನ್ನು ಹೊಂದಿದೆ. ಸದ್ಯ ದೆಹಲಿ ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದಾಗ ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆ ವೀರೇಂದ್ರ ಬಸೋಯಾ ಎಂಬಾತನ ಹೆಸರು ಹೊರಬಿದ್ದಿದೆ.

ಕಳೆದ ವಾರ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ಮಾದಕ ದ್ರವ್ಯ ದಂಧೆಯಲ್ಲಿ 500 ಕೆ.ಜಿ.ಗೂ ಹೆಚ್ಚು ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು. ದಕ್ಷಿಣ ದೆಹಲಿಯಲ್ಲಿ ದಾಳಿ ನಡೆಸಿದ ನಂತರ ಮಾದಕ ದ್ರವ್ಯ ದಂಧೆಗೆ ಸಂಬAಧಿಸಿದAತೆ ನಾಲ್ವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ದೆಹಲಿಯ ತಿಲಕ್ ನಗರದಲ್ಲಿ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡ ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿತ್ತು.ಇದನ್ನೂ ಓದಿ: ಶಿವಮೊಗ್ಗ–ಚೆನ್ನೈ ನಡುವೆ ವಿಮಾನಯಾನ ಶುರು

Share This Article