ಟಾಟಾ ಅವರ ಅಂತ್ಯಕ್ರಿಯೆ ವೇಳೆ ಅಂತಿಮ ನಮನ ಸಲ್ಲಿಸಿದ ʻಗೋವಾʼ!

Public TV
1 Min Read
Goa Ratan Tatas Dog Came To Pay Last Respects To Him

ನವದೆಹಲಿ: ಕೈಗಾರಿಕೋದ್ಯಮಿ ರತನ್ ಟಾಟಾರವರ (Ratan Tata, Goa, Dog) ಅಚ್ಚುಮೆಚ್ಚಿನ ನಾಯಿ (Dog) ‘ಗೋವಾ’ (Goa) ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ನಮನ ಸಲ್ಲಿಸಿದೆ. ಅವರ ಟಾಟಾ ನಾಯಿಗೆ ‘ಗೋವಾ’ ಎಂದು ಏಕೆ ಹೆಸರಿಟ್ಟರು ಎಂಬುದರ ಹಿಂದೆ ಒಂದು ವಿಶೇಷ ಕಥೆಯಿದೆ.

ಟಾಟಾ ಅವರು ನಾಯಿಗಳ ಬಗ್ಗೆ ವಿಶೇಷ ಸಹಾನುಭೂತಿ ಹೊಂದಿದ್ದರು. ಬೀದಿ ಪ್ರಾಣಿಗಳ ಕಲ್ಯಾಣಕ್ಕಾಗಿ ಪ್ರತಿಪಾದಿಸಿದ್ದರು. ಒಮ್ಮೆ ಅವರು ಗೋವಾದಲ್ಲಿದ್ದಾಗ ಬೀದಿ ನಾಯಿಯೊಂದು ಅವರ ಜೊತೆಯಲ್ಲಿ ಬರಲು ಆರಂಭಿಸಿತು. ಅವರು ಆ ನಾಯಿಯನ್ನು ಮುಂಬೈಗೆ ತಂದು ಸಾಕಲು ನಿರ್ಧರಿಸಿದರು. ಬಳಿಕ ಅದಕ್ಕೆ ‘ಗೋವಾ’ ಎಂದು ಹೆಸರಿಟ್ಟರು ಮತ್ತು ಮುಂಬೈನ ಬಾಂಬೆ ಹೌಸ್‌ನಲ್ಲಿ ಇತರ ನಾಯಿಗಳೊಂದಿಗೆ ʻಗೋವಾʼ ವಾಸಿಸುತ್ತಿದೆ.

 

View this post on Instagram

 

A post shared by Ratan Tata (@ratantata)

ಕಳೆದ 11 ವರ್ಷಗಳಿಂದ ʻಗೋವಾʼ ನಮ್ಮೊಂದಿಗಿದ್ದಾನೆ. ಗೋವಾದಿಂದ ವಿಹಾರಕ್ಕೆಂದು ಹೋದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳು ಈ ನಾಯಿಯನ್ನು ಕರೆತಂದಿದ್ದರು. ರತನ್ ಟಾಟಾ ಅವರು ಇದನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ‘ಗೋವಾ’ ಕೇರ್‌ಟೇಕರ್ ಹೇಳಿದ್ದಾರೆ.

ಟಾಟಾ ಅವರು ‘ಗೋವಾ’ ಮತ್ತು ಇತರ ನಾಯಿಗಳೊಂದಿಗೆ ತಮ್ಮ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಾಯಿಗಳೊಂದಿಗೆ ಅವರ ಸಂಬಂಧ ಗಾಢವಾಗಿತ್ತು.

2018 ರಲ್ಲಿ, ಅವರು ಬ್ರಿಟಿಷ್ ರಾಜಮನೆತನದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಕಿಂಗ್ ಚಾರ್ಲ್ಸ್ III (ಆಗಿನ ಪ್ರಿನ್ಸ್ ಚಾರ್ಲ್ಸ್) ಆಯೋಜಿಸಿದ ಮತ್ತು ಬ್ರಿಟಿಷ್ ಏಷ್ಯನ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭವು ಟಾಟಾ ಅವರ ಲೋಕೋಪಕಾರಿ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲು ನಿರ್ಧರಿಸಲಾಯಿತು.

ಮೊದಲು ಟಾಟಾ ಅವರು ಸಮಾರಂಭಕ್ಕೆ ಹಾಜರಾಗುವುದಾಗಿ ತಿಳಿಸಿದ್ದರು. ಬಳಿಕ ಅವರು ತಮ್ಮ ಅನಾರೋಗ್ಯದ ನಾಯಿಯನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಲು ನಿರ್ಧರಿಸಿದರು. ಈ ಕಥೆಯನ್ನು ಉದ್ಯಮಿ ಸುಹೇಲ್ ಸೇಥ್ ಅವರು ಹಂಚಿಕೊಂಡಿದ್ದರು.

ಟಾಟಾ ಅವರ ಅನೇಕ ಯೋಜನೆಗಳಲ್ಲಿ, ಮುಂಬೈನಲ್ಲಿರುವ ಸಣ್ಣ ಪ್ರಾಣಿ ಆಸ್ಪತ್ರೆ (SAHM) ಸಹ ಹೌದು. ಇದು ಪ್ರಾಣಿಗಳನ್ನು ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

Share This Article