ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದ ಹೊರ ವಲಯದಲ್ಲಿರುವ ಕೆರೆಯಲ್ಲಿ (Jagaluru Lake) ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ಮೀನುಗಳು (Fish) ಸತ್ತು ದಡ ಸೇರುತ್ತಿವೆ, ಆದ್ರೆ ಸಾವಿಗೆ ಕಾರಣ ಮಾತ್ರ ನಿಗೂಢವಾಗಿದೆ.
ಜಗಳೂರು ಪಟ್ಟಣದ ಕೆರೆ 700ಕ್ಕೂ ಅಧಿಕ ಎಕರೆ ಪ್ರದೇಶವನ್ನು ಹೊಂದಿದ್ದು ಮುಂಗಾರು ಮಳೆ ಉತ್ತಮವಾಗಿದ್ದು, ಕೆರೆಗೆ ಸಾಕಷ್ಟು ನೀರು ಹರಿದು ಬಂದಿದೆ. ಇದರ ಜೊತೆಗೆ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗೆ ನೀರು ಬರುತ್ತಿದ್ದು ಕೆರೆ ಕೋಡಿ ಬೀಳುವ ಹಂತದಲ್ಲಿದೆ. ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್
ಈ ವೇಳೆ ಕೆರೆಯಲ್ಲಿದ್ದ ಮೀನುಗಳು ಸಾವಿಗೀಡಾಗಿರುವುದು ಗುತ್ತಿಗೆ ಪಡೆದವರ ಚಿಂತೆಗೆ ಕಾರಣವಾಗಿದೆ. ಸಾಲ ಸೋಲ ಮಾಡಿ ಟೆಂಡರ್ ನಲ್ಲಿ ಕೆರೆ ಗುತ್ತಿಗೆ ಪಡೆದಿದ್ದು ಕಳೆದ ಕೆಲವು ವರ್ಷಗಳಿಂದ ಕೆರೆಗೆ ನೀರು ಬರದೇ ಇದ್ದಿದ್ದರಿಂದ ಮೀನಿನ ಉತ್ಪಾದನೆ ಆಗಿರಲಿಲ್ಲ. ಆದರೆ ಈ ಬಾರಿ ಕೆರೆ ತುಂಬಿದ್ದರೂ ಮೀನುಗಳು ಸಾಯುತ್ತಿವೆ ಎಂದು ಗುತ್ತಿಗೆದಾರರು ಗೋಳಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಒತ್ತಡಕ್ಕೆ ಮಣಿದು ಬಲವಂತವಾಗಿ ದೆಹಲಿ ಸಿಎಂ ಮನೆ ಖಾಲಿ ಮಾಡಿಸಲಾಗಿದೆ: ಎಎಪಿ ಆರೋಪ