ಹುಬ್ಬಳ್ಳಿ: ಆರ್‌ಸಿಬಿ ಟಿ20 ಆಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ ನಾನು ಟೆಸ್ಟ್ ಮ್ಯಾಚ್ ಆಡೋಕೆ ಬಂದವನು. ಲಂಬಿ ರೇಸ್ ಕಾ ಗೋಡಾ ಹು ನೋಡೋಣ ಎಂದು ತಮ್ಮ ವಿರೋಧಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ( B Y Vijayendra) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಹೈಕಮಾಂಡ್‌ಗೆ ಮಂಕುಬೂದಿ ಎರಚಬಹುದಾದ ತಾಕತ್ತು ಇದೆ ಎಂಬ ಮಾತನ್ನು ಅವರು ಒಪ್ಪಿಕೊಂಡಿದ್ದಾರೆ. ಇದು ಬಹಳಷ್ಟು ಸಂತೋಷ. ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ಬಿಟ್ಟು ಹೋದವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯೋಗ್ಯತೆ ಕಳೆದುಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಭಗವಂತ ಬುದ್ಧಿ ನೀಡಿದ್ದಾನೆ. ಆ ಕಾರ್ಯ ಮಾಡುತ್ತೇನೆ. ನಾನು ಯಾರ ಹೇಳಿಕೆ ಗಂಭೀರವಾಗಿ ಪರಿಗಣಿಸಲ್ಲ. ನೋವು ಮಾಡಿಕೊಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶುದ್ಧೀಕರಣ ಆಗಬೇಕೆಂದು ಕೆಲವರನ್ನು ಪಕ್ಷದಿಂದ ಹೊರಹಾಕಿದ್ದೆವು ಎಂದರು. ಇದನ್ನೂ ಓದಿ: ಪೂರ್ಣವಾಗಿ ಲಾಕ್ ಆಗುತ್ತಿಲ್ಲ ಹಿಪ್ಪರಗಿ ಬ್ಯಾರಜ್‌ನ 7ನೇ ಗೇಟ್
ಇನ್ನೂ ಸಿದ್ದರಾಮಯ್ಯ (CM Siddaramaiah) ಸಿಎಂ ಆಗಿ ಎರಡು ವರ್ಷ ಆಗುತ್ತಿದೆ. ಈ ಎರಡು ವರ್ಷದಲ್ಲಿ ಸಿದ್ದರಾಮಯ್ಯ ಎಲ್ಲೂ ಜಾತಿಗಣತಿ ಬಗ್ಗೆ ಮಾತನಾಡಿಲ್ಲ. ಅವರ ಮುಖ್ಯಮಂತ್ರಿ ಸ್ಥಾನ ಅಲ್ಲಾಡುತ್ತಿದೆ ಅಂತಾ ಈಗ ಜಾತಿಗಣತಿ ನೆನಪಾಗಿದೆಯಾ? ಹಗರಣಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಈ ದಾಳ ಉರುಳಿಸಿದ್ದಾರೆ. ಇದು ಯಾವುದೇ ಪ್ರಯೋಜನಕ್ಕೆ ಬರೋದಿಲ್ಲಾ. ಜಾತಿಗಣತಿಯಲ್ಲಿ ಪ್ರಾಮಾಣಿಕ ಕಳಕಳಿ ಇಲ್ಲ. ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ ಜಾತಿಗಣತಿ ವಿರೋಧ ಮಾಡಿದ್ದಾರೆ. ಕ್ಯಾಬಿನೆಟ್‌ನಲ್ಲಿ ತಂದು ವರದಿ ಅನುಷ್ಠಾನ ಮಾಡುತ್ತಾರೆ ಅನ್ನೋದು ಭ್ರಮೆ. ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಸದ್ಯದಲ್ಲೇ ಬಿಜೆಪಿ ಹಿರಿಯ ನಾಯಕರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್‌ಗೆ ಮಾತೃ ವಿಯೋಗ