– ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಬೆಂಗಳೂರು: ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರಿನ ಪೀಣ್ಯದಲ್ಲಿ (Peenya) ನಿಗೂಢವಾಗಿ ನೆಲೆಸಿದ್ದ ಪಾಕ್ ದಂಪತಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ.
ಇದೇ ಅಕ್ಟೋಬರ್ 3ರಂದು ಜಿಗಣಿ ಪೊಲೀಸರ (Jigani Police) ಬಲೆಗೆ ಬಿದ್ದಿದ್ದ ಪಾಕ್ ದಂಪತಿಯ ಬಗ್ಗೆ ಇದೀಗ ಬೆಂಗಳೂರು ನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಪೂರ್ವಪರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆ ವೇಳೆ ಕೆಲವು ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ
- Advertisement -
- Advertisement -
ಕಳೆದ 3 ವರ್ಷಗಳಿಂದ ಪೀಣ್ಯದ ಆಂದ್ರಹಳ್ಳಿ ಮುಖ್ಯರಸ್ತೆ ಮನೆಯಲ್ಲಿ ವಾಸವಾಗಿದ್ದ ದಂಪತಿ ನಿಗೂಢವಾಗಿ ನೆಲೆಸಿದ್ದರು. ಮನೆಯಿಂದ ಹೊರಗೆ ಬಾರದೇ ಒಳಗಡೆಯೆ ಇರುತ್ತಿದ್ದರು. ಪಾಕಿಸ್ತಾನ ಮೂಲದ ಸೈಯದ್ ತಾರೀಕ್ ತನ್ನ ಪತ್ನಿ ಹಾಗೂ ಮಗಳೊಂದಿಗೆ ಹೆಸರು ಬದಲಿಸಿಕೊಂಡು ಇಲ್ಲಿ ನೆಲೆಸಿದ್ದ. ಪೊಲೀಸರ ತನಿಖೆ ವೇಳೆ ರಹಸ್ಯವಾಗಿ ನೆಲೆಯೂರಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದ ಡಾ.ಕೆ.ಸುಧಾಕರ್
- Advertisement -
- Advertisement -
2014ರಲ್ಲಿ ಭಾರತಕ್ಕೆ ಎಂಟ್ರಿಯಾಗಿದ್ದ ಈ ದಂಪತಿ, 2019 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಹೆಸರು ಬದಲಿಸಿಕೊಂಡು, ನಕಲಿ ಆಧಾರ್ ಕಾರ್ಡ್ ಸಹ ಮಾಡಿಸಿಕೊಂಡಿದ್ದರು. ಅಂದಿನಿಂದ ಮನೆಯಲ್ಲಿ ಧರ್ಮ ಪ್ರಚಾರ ಮತ್ತು ಧಾರ್ಮಿಕ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್‌ನಲ್ಲಿ ಪ್ರಚಾರ ಕಾರ್ಯ ನಡೆಸುತ್ತಾ ಇದ್ದರು. ಖರ್ಚು ವೆಚ್ಚಕ್ಕೆ ಸಂಸ್ಥೆಯೊಂದರಿಂದ ಹಣಕಾಸು ನೆರವು ಬರುತ್ತಿತ್ತು ಎಂಬೆಲ್ಲಾ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಏರಿದ ಚಿರತೆ