ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್‍ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದೆ.
ಮೊದಲ ದಿನ 4 ವಿಕೆಟ್ ಕಳೆದುಕೊಂಡು 299 ರನ್‍ಗಳಿಸಿದ್ದ ಆಸ್ಟ್ರೇಲಿಯಾ ಇಂದು 6 ವಿಕೆಟ್‍ಗಳ ಸಹಾಯದಿಂದ 152 ರನ್ ಗಳಿಸಿ 137.3 ಓವರ್‍ಗಳಲ್ಲಿ 451 ರನ್‍ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಜವಾಬು ನೀಡಲು ಆರಂಭಿಸಿದ ಭಾರತ ಎರಡನೇ ದಿನದ ಆಟದ ಆಂತ್ಯಕ್ಕೆ 40 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್‍ಗಳಿಸಿದೆ.
- Advertisement 2-
ಗುರುವಾರ 82 ರನ್‍ಗಳಿಸಿ ಅಜೇಯರಾಗಿದ್ದ ಮ್ಯಾಕ್ಸ್ ವೆಲ್ ಇಂದು ಟೆಸ್ಟ್ ಕ್ರಿಕೆಟ್ ಬಾಳ್ವೆಯ ಮೊದಲ ಶತಕ ಹೊಡೆದರು. 180 ಎಸೆತಗಳಲ್ಲಿ ಶತಕ ಹೊಡೆದ ಮ್ಯಾಕ್ಸ್ ವೆಲ್ ಅಂತಿಮವಾಗಿ 104 ರನ್(185 ಎಸೆತ, 9 ಬೌಂಡರಿ, 2 ಸಿಕ್ಸರ್)ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಮತ್ತು ಮ್ಯಾಕ್ಸ್ ವೆಲ್ 354 ಎಸೆತಗಳಲ್ಲಿ 5ನೇ ವಿಕೆಟ್‍ಗೆ 191 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.
- Advertisement 3-
ಮ್ಯಾಥ್ಯು ವೇಡ್ 37 ರನ್, ಸ್ವೀವ್ ಓ ಕೀಫ್ 25 ರನ್‍ಗಳಿಸಿ ಔಟಾದರು. ಆರಂಭಿಕ ಆಟಗಾರ ವಾರ್ನರ್ ಔಟಾದ ಬಳಿಕ ಕ್ರೀಸ್‍ಗೆ ಬಂದ ನಾಯಕ ಸ್ವೀವ್ ಸ್ಮಿತ್ ಅಜೇಯ 178 ರನ್(361 ಎಸೆತ, 17 ಬೌಂಡರಿ) ಹೊಡೆಯುವ ಮೂಲಕ ತಂಡದ ರನ್ ಬೆಟ್ಟವನ್ನು ಕಟ್ಟಿದರು.
- Advertisement 4-
ರವೀಂದ್ರ ಜಡೇಜಾ 124 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 106 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 114 ರನ್ ನೀಡಿ 1 ವಿಕೆಟ್ ಕಿತ್ತರು. 9 ಬೈ, 11 ಲೆಗ್ ಬೈ, 2 ನೋಬಾಲ್ ಎಸೆಯುವ ಮೂಲಕ ಭಾರತದ ಬೌಲರ್‍ಗಳು ಇತರೇ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿದ್ದಾರೆ.
ದಿಟ್ಟ ಹೋರಾಟ: ಪ್ರತಿ ಹೋರಾಟ ಆರಂಭಿಸಿದ ಭಾರತ 40 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಕೆಎಲ್ ರಾಹುಲ್ 67 ರನ್( 102 ಎಸೆತ, 9 ಬೌಂಡರಿ) ಗಳಿಸಿ ಔಟಾದರು. ಮುರಳಿ ವಿಜಯ್ ಅಜೇಯ 42 ರನ್(112 ಎಸೆತ, 6 ಬೌಂಡರಿ) ಚೇತೇಶ್ವರ ಪೂಜಾರ 10 ರನ್‍ಗಳಿಸಿ ಕ್ರೀಸ್‍ನಲ್ಲಿ ಆಡುತ್ತಿದ್ದಾರೆ. ರಾಹುಲ್ ಮತ್ತು ವಿಜಯ್ 31.2 ಓವರ್‍ಗಳಲ್ಲಿ ಮೊದಲ ವಿಕೆಟ್‍ಗೆ 91 ರನ್‍ಗಳ ಜೊತೆಯಾಟವಾಡುವ ಮೂಲಕ ಭಾರತದ ಇನ್ನಿಂಗ್ಸ್ ಗೆ ಗಟ್ಟಿ ಆಡಿಪಾಯ ಹಾಕಿದ್ದಾರೆ.