ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ: ಈರಣ್ಣ ಕಡಾಡಿ

Public TV
1 Min Read
iranna kadadi 1

ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿ (Jammu-Kashmir) ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಅಸ್ತಿತ್ವ ಇಲ್ಲದ ರಾಜ್ಯದಲ್ಲಿ ನಮಗೆ ಈ ಸಲ ಹೆಚ್ಚಿನ ಸ್ಥಾನಗಳು ಬಂದಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ (Iranna Kadadi) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬಗ್ಗೆ ದೊಡ್ಡ ಪ್ರಮಾಣದ ಅಪಪ್ರಚಾರ ಇರುವ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಬೆಂಬಲ ಸಿಕ್ಕಿದೆ. ಬರುವ ದಿನಗಳಲ್ಲಿ ಪಕ್ಷವನ್ನು ಜಮ್ಮು-ಕಾಶ್ಮೀರದಲ್ಲಿ ಗಟ್ಟಿ ಮಾಡುತ್ತೇವೆ. ವಿರೋಧ ಪಕ್ಷವಾಗಿ ಆ ರಾಜ್ಯಕ್ಕೆ ಹೇಗೆ ನ್ಯಾಯ ಕೊಡಿಸಬೇಕೋ? ಕೊಡಿಸುತ್ತೇವೆ ಎಂದರು. ಇದನ್ನೂ ಓದಿ: ಟಿಕೆಟ್‌ಗಾಗಿ ದೆಹಲಿಯಲ್ಲೇ ಬೀಡುಬಿಟ್ಟ ಸಿಪಿವೈ – ಪಕ್ಷೇತರ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ

ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ (BJP) ಹಿನ್ನಡೆ ಆಗಲಿದೆ ಎಂದು ಸರ್ವೆ ವರದಿಗಳು ಹೇಳಿದ್ದವು. ಎರಡು ಸಲ ಅಧಿಕಾರ ನಡೆಸಿದ ಕಾರಣಕ್ಕೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಹರಿಯಾಣ ಜನ ನಮ್ಮನ್ನು ಒಪ್ಪಿಕೊಂಡು, ಬಹುಮತ ಕೊಟ್ಟಿದ್ದಾರೆ. ಅಲ್ಲಿನ ಜನರಿಗೆ ನಾನು ಅಭಿನಂದಿಸುವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಕಾನ್ವೆ ರೂಲ್ಸ್ ಬ್ರೇಕ್ – ಜನಾರ್ದನ ರೆಡ್ಡಿ ಕಾರನ್ನು ಸೀಜ್ ಮಾಡಿದ ಪೊಲೀಸರು

ಹರಿಯಾಣದ ಜನ ಕಾಂಗ್ರೆಸ್ (Congress) ಗ್ಯಾರಂಟಿ ನೋಡದೇ ಬಿಜೆಪಿಗೆ ಬಂಬಲಿಸಿರುವ ವಿಚಾರಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಹೇಗೆ ನಗೆಪಾಟಲಿಗೆ ಈಡಾಗಿದೆ ಎಂದು ಎಲ್ಲರಿಗೂ ಗೊತ್ತು. ಗ್ಯಾರಂಟಿ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗುತ್ತಿಲ್ಲ. ಮಂತ್ರಿಗಳು ಗುದ್ದಲಿ ಪೂಜೆ ಮಾಡಿಲ್ಲ. ಆಡಳಿತ ವ್ಯವಸ್ಥೆ ಹಣಕಾಸಿನ ಕೊರತೆಯಿಂದ ಕುಸಿದು ಬಿದ್ದಿದೆ. ಜನರ ಎದುರು ಹೋಗಲು ಶಾಸಕರೇ ತಯಾರಿಲ್ಲ. ಗ್ಯಾರಂಟಿ ಮುಂದುವರೆಸಿದರೆ ಕಷ್ಟ ಇದೆ ಎಂದು ತಿಳಿಸಿದರು. ಇದನ್ನೂ ಓದಿ: Haryana Election Results| ಜಿಲೇಬಿ ಟ್ರೆಂಡ್‌ ಆಗಿದ್ದು ಯಾಕೆ?

Share This Article