ಹಾಸನ: ಜಾತಿ ಜನಗಣತಿ ವರದಿ ಸಿಎಂ ಹಾಗೂ ಡಿಸಿಎಂ ಕೈಯಲ್ಲಿದೆ. ಅದರ ಜಾರಿಯ ಬಗ್ಗೆ ಇಬ್ಬರು ಒಳ್ಳೆಯ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವರದಿ ಜಾರಿ ಬಗ್ಗೆ ಸಿಎಂ, ಡಿಸಿಎಂ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಈ ಬಗ್ಗೆ ಅಂತಿಮವಾಗಿ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಲಾಗುತ್ತದೆ. ಕ್ಯಾಬಿನೆಟ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡುವ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಕ್ಕೆ ರೈಲುಗಳಲ್ಲಿ ಮಾದಕ ವಸ್ತು ಸರಬರಾಜು – ಅಧಿಕಾರಿಗಳಿಗೆ ಶ್ರೇಯಸ್ ಪಟೇಲ್ ಕ್ಲಾಸ್
ಕ್ಯಾಬಿನೆಟ್‍ನಲ್ಲಿ ಒಳ್ಳೆಯ ರೀತಿ ತೀರ್ಮಾನ ಆಗುತ್ತದೆ. ಅದರಲ್ಲಿ ಯಾವುದೇ ಸಂಶಯ ಬೇಡ. ಈ ವಿಚಾರದಲ್ಲಿ ನನ್ನ ವೈಯುಕ್ತಿಕ ತೀರ್ಮಾನ ಒಂದೇ, ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ತೀರ್ಮಾನವೇ ಅಂತಿಮ. ಅದನ್ನು ಬಿಟ್ಟು ನಾವ್ಯಾರು ಮಾತನಾಡಬಾರದು ಎಂದಿದ್ದಾರೆ.
ಸಚಿವ ಸತೀಶ್ ಜಾರಕಿಹೋಳಿ ಕಾಂಗ್ರೆಸ್ ನಾಯಕರ ಭೇಟಿ ವಿಚಾರಕ್ಕೆ ಸಂಬಂದಿಸಿದಂತೆ, ಈ ಬೆಳವಣಿಗೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿಎಂ ಸೀಟ್ ಎಲ್ಲಿ ಖಾಲಿ ಇದೆ? ಮುಖ್ಯಮಂತ್ರಿಯಾಗಿ ಜನಮೆಚ್ಚಿದ ನಾಯಕ ಸಿದ್ದರಾಮಯ್ಯನವರು ಇದ್ದಾರೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ