ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ – ಅನಾರೋಗ್ಯದ ಬಗ್ಗೆ ರತನ್ ಟಾಟಾ ಸ್ಪಷ್ಟನೆ

Public TV
1 Min Read
ratan tata

ಮುಂಬೈ: ರಕ್ತದೊತ್ತಡ (BP) ಕುಸಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳನ್ನು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata)ಅವರು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ನಾನು ಆರೋಗ್ಯವಾಗಿದ್ದೇನೆ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಹೇಳಿಕೊಂಡಿದ್ದಾರೆ.

ratan tata 1

ರತನ್ ಟಾಟಾ ಅವರ ಬಿಪಿ ತೀವ್ರ ಪ್ರಮಾಣದಲ್ಲಿ ಕುಸಿದ ಕಾರಣ ಆರೋಗ್ಯ ಪರಿಸ್ಥಿತಿ ಏರುಪೇರಾಗಿದ್ದು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿದೆ. ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿತ್ತು. ವರದಿ ಬೆನ್ನಲ್ಲೇ ತಮ್ಮ ಶೋಷಿಯಲ್ ಮಿಡಿಯಾಗಳಲ್ಲಿ ಸ್ಪಷ್ಟನೆ ನೀಡಿರುವ ಅವರು, ವಯೋಸಹಜ ಸಮಸ್ಯೆಗಳಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದೇನೆ, ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಫೇಕ್ ಷೇರು ಮಾರ್ಕೆಟ್ ವೆಬ್‌ಸೈಟ್‌ ಮಾಡಿ ಕೊಟ್ಯಂತರ ರೂ. ವಂಚನೆ – 8 ಸೈಬರ್ ವಂಚಕರು ಅರೆಸ್ಟ್‌

ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದೇನೆ, ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿವೆ ಆ ಬಗ್ಗೆ ನನಗೆ ಮಾಹಿತಿ ಇದೆ, ನಾನು ಹಿಂದಿನ ಉತ್ಸಾಹದಲ್ಲೇ ಇರುತ್ತೇನೆ ತಪ್ಪು ಮಾಹಿತಿ ಹರಡದಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಕ್ರೋRNA ಆವಿಷ್ಕಾರ – ವಿಕ್ಟರ್‌, ಗ್ಯಾರಿಗೆ ನೊಬೆಲ್‌ ಪುರಸ್ಕಾರ

Share This Article