ಮೈಸೂರು: ದಸರಾ ಮಹೋತ್ಸವದ ಅಂತವಾಗಿ ನಡೆದ ಯುವ ದಸರಾ (Yuva dasara) ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದ್ಧೂರಿ ಚಾಲನೆ ನೀಡಿದರು. ಮೊದಲ ದಿನವೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಹಾಡಿಮ ಮೂಲಕ ಮೋಡಿ ಮಾಡಿದರು. ಮಳೆ ಭೀತಿ ನಡುವೆಯೂ ಯುವ ಸಮೂಹ ಹುಚ್ಚೆದ್ದು ಕುಣಿಯುತ್ತಿತ್ತು.
ಮಹಾರಾಜು ಕಾಲೇಜು ಮೈದಾನದ ಬಳಿ ಟ್ರಾಫಿಕ್ ದಟ್ಟಣೆ ನಿವಾರಿಸಲು ಇದೇ ಮೊದಲ ಬಾರಿಗೆ ಮೈಸೂರಿನ ಉತ್ತನಹಳ್ಳಿ ಸಮೀಪ ಯುವ ದಸರಾ ಆಯೋಜಿಸಲಾಗಿದೆ. ಇದನ್ನೂ ಓದಿ: ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ ಕೇಂದ್ರ ಸರ್ಕಾರ ಬಿಗ್ ಶಾಕ್ – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರದ್ದು
ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರ ʻಸುನ್ ರಹಾ ಹೇನʼ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಯುವ ದಸರಾ ಕಾರ್ಯಕ್ರಮದ ಮೊದಲ ದಿನ ದರ್ಶನ್ ನಟನೆಯ ʻಚಕ್ರವರ್ತಿʼ ಚಿತ್ರದ ʻಒಂದು ಮಳೆ ಬಿಲ್ಲುʼ, ಕೊಟ್ಟಿಗೊಬ್ಬ-2 ಚಿತ್ರದ ʻಸಾಲುತಿಲ್ಲವೇ ಸಾಲುತಿಲ್ಲವೇʼ, ಸಂಜು ವೆಡ್ಸ್ ಗೀತಾ ಚಿತ್ರದ ʻಗಗನವೇ ಬಾಗಿʼ ಗೀತೆ ಹಾಡುವ ಮೂಲಕ ಯುವಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್