ಬೆಂಗಳೂರಲ್ಲಿ ಮಳೆ ಅವಾಂತರ: ಕೆಸರು ನೀರಲ್ಲಿ ಬಿದ್ದ ಬೈಕ್ ಸವಾರ

Public TV
1 Min Read
Bengaluru Rain

– ಬಳಗೆರೆಯಿಂದ ಕುಂದಹಳ್ಳಿ ರಸ್ತೆ ಸಂಪೂರ್ಣ ಜಲಾವೃತ – ವಾಹನ ಸವಾರರ ಪರದಾಟ

ಬೆಂಗಳೂರು: ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಕೆಲವು ಕಡೆ ಅವಾಂತರಗಳು ಸೃಷ್ಟಿಯಾಗಿದ್ದು, ಮಹಾದೇವಪುರ (Mahadevapura) ಕ್ಷೇತ್ರದಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಸರು ನೀರಲ್ಲಿ ಬೈಕ್ ಸವಾರ ಮತ್ತು ಯುವತಿ ಬಿದ್ದ ಘಟನೆ ನಡೆಯಿತು.

ನಗರದ ಬಳಗೆರೆಯಿಂದ (Balagere) ಕುಂದಲಹಳ್ಳಿ (Kudalahalli) ರಸ್ತೆ ಕಡೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ ಪ್ರಮಾಣದ ಹಾನಿಯುಂಟು ಮಾಡಿದ್ದು, ರಸ್ತೆಗಳು ಕೆರೆಯ ರೂಪವನ್ನು ತಾಳಿವೆ. ಇದರಿಂದಾಗಿ ರಸ್ತೆಯ ಮೇಲಿದ್ದ ಡಾಂಬರು ಕಿತ್ತು ಬರುತ್ತಿದೆ.ಇದನ್ನೂ ಓದಿ: ಪಂಜಾಬ್‌ ಎಎಪಿ ನಾಯಕನ ಮೇಲೆ ಗುಂಡಿನ ದಾಳಿ

ಕೇವಲ ಒಂದೇ ಒಂದು ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದು ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ. ಮೊಣಕಾಲುದ್ದ ಬಿದ್ದ ಗುಂಡಿಗಳಿಂದ ವಾಹನ ಸವಾರರಿಗೆ ನಿಯಂತ್ರಣ ತಪ್ಪುತ್ತಿದೆ. ಹೀಗಾಗಿ ಗುಂಡಿಗಳಲ್ಲಿ ವಾಹನಗಳು ಸಿಕ್ಕಿಕೊಂಡು ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ತಗ್ಗು ಪ್ರದೇಶಗಳು ಮುಳುಗಿ ಹೋಗಿವೆ.

ಆಳವಾದ ಗುಂಡಿಗಳಿಗೆ ಎಎಪಿ ಕಾರ್ಯಕರ್ತರಿಂದ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಸ್ಥಳೀಯರು ಸಹಾಯಕ್ಕಿಳಿದಿದ್ದಾರೆ.ಇದನ್ನೂ ಓದಿ: ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್?

Share This Article