ಸಿಎಂ ಏನ್ ದೆವ್ವನಾ ನಾನು ಹೆದರೋಕೆ – ಸಿದ್ದರಾಮಯ್ಯಗೆ ಹೆಚ್‌ಡಿಕೆ ತಿರುಗೇಟು

Public TV
1 Min Read
HD Kumaraswamy 2 1

ಬೆಂಗಳೂರು: ಸಿದ್ದರಾಮಯ್ಯನಂತಹ (Siddaramaiah) ಲಕ್ಷ ಜನ ಬಂದರೂ ನಾನು ಹೆದರುವುದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾಕೆ ಸಿದ್ದರಾಮಯ್ಯಗೆ ಹೆದರಬೇಕು. ನಾನು ಸಿದ್ದರಾಮಯ್ಯ ನೆರಳಲ್ಲಿ ರಾಜಕೀಯಕ್ಕೆ ಬಂದಿದ್ದೀನಾ? ಸ್ವಂತ ದುಡಿಮೆಯಲ್ಲಿ, ಕಾರ್ಯಕರ್ತರ ದುಡಿಮೆಯಲ್ಲಿ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ರಾಜಕೀಯ ಮಾಡಿಲ್ಲ. ದೇವೇಗೌಡರ (Devegowda) ನೆರಳಲ್ಲಿ ಬಂದ ನಾನು ನಾಡಿನ ಜನರಿಗೆ ಮಾತ್ರ ಹೆದರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮುಡಾಸ್ತ್ರಕ್ಕೆ ಜಾತಿ ಜನಗಣತಿ ಪ್ರತ್ಯಾಸ್ತ್ರ ಬಿಟ್ಟ ಸಿಎಂ – ಕಾಂಗ್ರೆಸ್‌ನಲ್ಲಿ ಮತ್ತೆ ಪರ-ವಿರೋಧಕ್ಕೆ ವೇದಿಕೆ ಸಜ್ಜು

 

ಸಿಎಂ ಅವರು ದೆವ್ವ ಹಾಗಿದ್ದರೆ ಭಯ ಬೀಳಬೇಕು. ದೆವ್ವ ಅಲ್ಲವಲ್ಲ ನಾನ್ಯಾಕೆ ಭಯ ಬೀಳಲಿ. ನನ್ನ ಜೆಡಿಎಸ್ (JDS) ದುರ್ಬಲ ಆಗುತ್ತೋ ಬಲಗೊಳ್ಳುತ್ತೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ಮೊದಲು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಿ. ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ ಎಂದರು.

ಕುಮಾರಸ್ವಾಮಿ ಹತ್ತಿರ ಇವರದು ಏನು ನಡೆಯಲ್ಲ. ಎಫ್‌ಐಆರ್ ಮಾಡಿ ಹೆದರಿಸುವ ಕೆಲಸ ಅಷ್ಟೇ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡಲಿದೆ. ಈ ಸರ್ಕಾರ ಎಲ್ಲವನ್ನು ಬಿಟ್ಟಿರುವ ಸರ್ಕಾರ. ಭಯ ಭಕ್ತಿ ಇಲ್ಲದ ಭಂಡ ಸರ್ಕಾರ. ಇವತ್ತಿನ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.

Share This Article