ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ, ದರ್ಶನ್ ಹೊಡೆದಿಲ್ಲ: ಕೋರ್ಟ್‌ನಲ್ಲಿ ವಕೀಲ ಸಿ.ವಿ ನಾಗೇಶ್ ವಾದ ಹೇಗಿತ್ತು?

Public TV
4 Min Read
Darshan CV Nagesh 4

– ಇಡೀ ಪ್ರಕರಣ ಕಪೋಲಕಲ್ಪಿತ ಸ್ಟೋರಿ; ನೀರಿನ ಬಾಟಲಿಯನ್ನೇ ಸಾಕ್ಷಿ ಅಂದಿದ್ದಾರೆ
– ಕೋರ್ಟ್‌ನಲ್ಲಿ ಹಿರಿಯ ವಕೀಲ ಸಿ.ವಿ ನಾಗೇಶ್ ಅಬ್ಬರ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ. ಇವತ್ತು ಸಿಸಿಹೆಚ್ 57ನೇ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ ಪರ ಹಿರಿಯ ವಕೀಲ ಸಿ.ವಿ ನಾಗೇಶ್ (Advocate CV Nagesh) ವಾದ ಮಂಡಿಸಿದ್ರು.

Darshan CV Nagesh

ಈ ವೇಳೆ ಈ ಪ್ರಕರಣದ ತನಿಖೆ (Investigation) ತುಂಬಾ ಕೆಟ್ಟದ್ದಾಗಿ ನಡೆದಿದೆ. ಸುಪ್ರೀಂ ಕೋರ್ಟ್‌ನ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಪೋಲಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು. ಇದನ್ನೂ ಓದಿ: ‌ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಚಾ ಹೇಳಿಕೆ, ಫೋಸ್ಟ್ ಮಾರ್ಟ್ಂ ರಿಪೋರ್ಟ್, ಐ ವಿಟ್ನೆಸ್ ಅನ್ನು ಬಿತ್ತರ ಮಾಡಿವೆ. ತನಿಖೆಯ ಪ್ರತೀ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ವಿಧಿಸೋದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.

Darshan CV Nagesh 3

ಎಸ್‌ಪಿಪಿ (SPP) ಅತ್ಯುತ್ತಮ ತನಿಖೆ ಅಂತ ಕೋರ್ಟ್‌ಗೆ ಹೇಳಿದ್ದಾರೆ. ಆದರೆ ಇದು ನನ್ನ ಪ್ರಕಾರ ತುಂಬಾ ಕೆಟ್ಟದಾದ ತನಿಖೆ ಎನ್ನುತ್ತಾ ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳ ಉಲ್ಲೇಖಿಸಿ ವಾದ ಮಂಡಿಸಿದರು. ಈ ವೇಳೆ ತೀರ್ಪಿನ ಪ್ರತಿಯನ್ನು ಎಸ್‌ಪಿಪಿ ಕೇಳಿದರು. ಅದಕ್ಕೆ ಗರಂ ಆದ ಸಿ.ವಿ ನಾಗೇಶ್, ನಾನು ಕೆಲಸ ಮಾಡಿ ತಂದಿರೋ ತೀರ್ಪು ಇದು. ನಾನು ನಿಮಗೆ ಪ್ರತಿ ಕೊಡೋಲ್ಲ, ಪ್ರಸನ್ನ ನೀವೇ ಹುಡುಕಿ ಎಂದರು. ಇದನ್ನೂ ಓದಿ: ದಸರಾ ಉದ್ಘಾಟನೆ ವೇದಿಕೆ ರಾಜಕೀಯವಾಗಿ ಬಳಸಿದ ಸಿಎಂ; ಜಿಟಿಡಿ ಹೇಳಿಕೆ ಸಿಎಂ ಓಲೈಕೆಗಾಗಿ – ಛಲವಾದಿ ನಾರಾಯಣಸ್ವಾಮಿ

ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ.
ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತ ದೇಹದ ಫೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರೌರ್ಯ ಅಂತ ಹೇಳಿದ್ರು. ಹಲ್ಲೆ ಎಂದು ಬಿಂಬಿಸಿ ಸುದ್ದಿ ಸಹ ಮಾಡಿವೆ. ನಾಯಿ ಕಚ್ಚಿ ಅವನ ಮುಖ ತಿಂದಿದೆ. ಇದೆನ್ನೆಲ್ಲಾ ಪರಿಗಣಿಸಿ ಕೋರ್ಟ್ ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.

Darshan CV Nagesh 2

ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ:
ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೆಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಅಲ್ಲಿಯೇ ಪೊಲೀಸರ ವಶದಲ್ಲಿ ಇತ್ತು. ಈ ವಸ್ತುಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.

ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ, ಪೊಲೀಸರಿಗೆ ಸಿಕ್ಕಿದ್ದು ಶೂ:
ಅಲ್ಲದೇ ದರ್ಶನ್ ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ ಅಂತ ಇದೆ. ಅದರೆ ಪೊಲೀಸರು ವಶಕ್ಕೆ ಪಡೆದಿರೋದು ಶೂ. ಸ್ವ-ಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಬಂದರೆ ತೋರಿಸುವುದಾಗಿ ಹೇಳಿದ್ದಾರೆ. ಆದ್ರೆ, ಮನೆಯಲ್ಲಿ ಶೂಗಳು ಹೇಗಾದವು? ಇಷ್ಟೇಲ್ಲಾ ಆದ್ಮೇಲೆ ಹೇಳಿಕೆ ಬದಲಿಸಿದ್ದಾರೆ. ಮೊದಲು ಹೇಳಿಕೆ ಕೊಟ್ಟಾಗ ಚಪ್ಪಲಿ ಚಪ್ಪಲಿ ಅಂದಿದ್ದಾರೆ. ಕೊನೆಗೆ ಅದನ್ನೇ ಶೂ ಎಂದು ಹೇಳಿಕೆ ಬದಲಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.

ರಕ್ತದ ಕಲೆ ಬಿಟ್ಟು ಉಳಿದೆಲ್ಲ ಕಡೆ ತೊಳೆದಿದ್ದರಂತೆ:
ಪೊಲೀಸರು ಮೊದಲ ಬಾರಿಗೆ ಹೋದಾಗ ರಕ್ತದ ಕಲೆ ಇತ್ತು ಎನ್ನಲಾದ ಬಟ್ಟೆ ಸಿಕ್ಕಿಲ್ಲ. ಆಮೇಲೆ ಅದೇ ಬಟ್ಟೆಯನ್ನು ಶರ್ಫ್ ಹಾಕಿ ತೊಳೆದಿದ್ದಾರೆ ಎಂದು ಹೇಳಿಕೆ ದಾಖಲಿಸಲಾಗಿದೆ. ರಕ್ತದ ಕಲೆ ಇರೋ ಜಾಗ ಬಿಟ್ಟು, ಇನ್ನೆಲ್ಲಾ ಕಡೆ ಬಟ್ಟೆ ತೊಳೆದಿದ್ದರು ಅನ್ಸುತ್ತೆ. ಅದಕ್ಕೆ ರಕ್ತದ ಕಲೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಶರ್ಫ್ ಹಾಕಿ ತೊಳೆದು ಒಣಗಿಸಲಾಗಿತ್ತು. ಶನಿವಾರ ಕೊಲೆ ಆಗಿದೆ – ಭಾನುವಾರ ಬಟ್ಟೆ ಇಟ್ಟಿದ್ದಾರೆ. ಸೋಮವಾರ ಸುಶೀಲಮ್ಮ ತೊಳೆದು ಒಣಗಿ ಹಾಕಿದ್ದಾರೆ. ಇಷ್ಟೇಲ್ಲಾ ಉತ್ತಮವಾಗಿ ತೊಳೆದ್ರೂ ಕೂಡ ರಕ್ತದ ಕಲೆ ಸಿಕ್ಕಿದೆ ಅಂತೆ ಎಂದು ಹಾಸ್ಯಮಾಡಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ

ದರ್ಶನ್ ಪರ ವಾದದ ಮುಖ್ಯಾಂಶಗಳು
* ರೇಣುಕಾಗೆ ದರ್ಶನ್ ಹೊಡೆದಿರೋದ್ದಲ್ಲ.. ನಾಯಿ ಮುಖವನ್ನು ತಿಂದಿದೆ
* ಜೂ.8ಕ್ಕೆ ಕೊಲೆ ಆಗಿದೆ; 9ಕ್ಕೆ ಸ್ಪಾಟ್‌ಗೆ ಹೋಗಿದ್ದಾರೆ
* ಜೂನ್ 12ಕ್ಕೆ ಸೀಜ್ ಮಾಡಿಕೊಂಡಿಕೊಂಡಿದ್ದಾರೆ
* ಜೂ 9ಕ್ಕೆ ಗೊತ್ತಾದ್ರೂ ಏನ್ ಮಾಡುತ್ತಿದ್ದರು..?
* ತಡವಾಗಿ ಪೊಲೀಸರಿಂದ ಪಂಚನಾಮೆ.. ಪಿಎಸ್‌ಐ ಏಕೆ ಸುಮ್ಮನಿದ್ರು….?
* ಟಾರ್ಚ್ ಹಿಡಿದುಕೊಂಡು ಹೋಗಿ ಸೀಜ್
* 164 ಅಡಿ ಸೆಕ್ಯೂರಿಟಿ ಹೇಳಿಕೆ ದಾಖಲಿಸಿದ್ದಾರೆ.. ಸೆಕ್ಯೂರಿಟಿ ಗಾರ್ಡ್‌ಗೆ ಕನ್ನಡ ಬರಲ್ಲ
* ರೇಣುಕಾ ಶೂನಲ್ಲಿ ರಕ್ತದ ಕಲೆಗಳು ಇಲ್ಲ
* ಜೂ.14ಕ್ಕೆ ದರ್ಶನ್ ಶೂಗಳು ವಶಪಡಿಸಿಕೊಂಡಿದ್ದಾರೆ
* ಸಾಕ್ಷಿಗಳನ್ನು ಹುಡುಕಲು ಮ್ಯಾಜಿಕ್ ಶೋ ಮಾಡಿದ್ದಾರೆ
* ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಅಂದಿದ್ದಾರೆ.. ಮನೆಗೆ ಬಂದಾಗ ಶೂ ಆಗಿದ್ದೇಗೆ…?
* ರಕ್ತದ ಕಲೆಯ ಬಟ್ಟೆ ವಶ ಅಂತ ಹೇಳಲಾಗಿದೆ
* ಶನಿವಾರ ಕೊಲೆ ಆಗಿದೆ, ಭಾನುವಾರ ಇಟ್ಟಿದ್ದಾರೆ.. ಸೋಮವಾರ ಒಗೆದು ಹಾಕಿದ್ದಾರೆ…!
* ಬಟ್ಟೆ ಒಗೆದವರ ಸ್ವ ಇಚ್ಛಾ ಹೇಳಿಕೆಯೇ ಇದೆ
* ಇಷ್ಟೆಲ್ಲಾ ಆದ್ರೂ ರಕ್ತದ ಕಲೆ ಸಿಕ್ಕಿದ್ದೇಗೆ…?

Share This Article