ರಾಯಚೂರು: ನಗರದ ವೀರಶೈವ ಗೌಳಿ ಸಮಾಜದ ವತಿಯಿಂದ ಕಳೆದ 42 ವರ್ಷಗಳಿಂದ ಆಚರಿಸುತ್ತ ಬಂದಿರುವ ಶರನ್ನವರಾತ್ರಿ ಉತ್ಸವವನ್ನ (Sharannavaratri Utsav) ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಅಂಬಾಭವಾನಿ ರಜತ ಮೂರ್ತಿ ಪಲ್ಲಕ್ಕಿ ಸೇವೆಯೊಂದಿಗೆ ನಗರದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಬೃಹನ್ ಕಿಲ್ಲೆ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರತೀವರ್ಷ ಅಂಬಾಭವಾನಿ ಮೆರವಣಿಗೆ ನೆರವೇರಿಸಲಾಗುತ್ತಿದೆ. ಇದನ್ನೂ ಓದಿ: ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ
ಮೆರವಣಿಯಲ್ಲಿ ಕಳಸ ಕುಂಭದೊಂದಿಗೆ ಮಹಿಳೆಯರು ಭಾಗವಹಿಸಿದ್ದರು. ವಿವಿಧ ನೃತ್ಯ ಕಲಾ ತಂಡಗಳು, ಸಮಾಜದ ಯುವಕರ ನೃತ್ಯ ತಂಡಗಳು ಮೆರವಣಿಗೆಯಲ್ಲಿ ಕಣ್ಮನ ಸೆಳೆದವು. ಶರನ್ನವರಾತ್ರಿ ಅಂಗವಾಗಿ ರಾಯಚೂರಿನ (Raichur) ವೀರಶೈವ ಗೌಳಿ ಸಮಾಜದಿಂದ ಅ.3 ರಿಂದ 12ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ