ಯತ್ನಾಳ್‌ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ

Public TV
1 Min Read
Strict action should be taken against Basanagouda Patil Yatnal Former MP Muniswamy

ಬಳ್ಳಾರಿ: ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಮುನಿಸ್ವಾಮಿ (Muniswamy) ಆಗ್ರಹಿಸಿದ್ದಾರೆ.

ಬಿಜೆಪಿಯಲ್ಲಿ (BJP) ನಾಯಕರ ಪರಸ್ಪರ ಟೀಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದ್ದು ಕೂಡಲೇ ಅಂತವರ ಮೇಲೆ ಹೈಕಮಾಂಡ್ (High Command) ಕ್ರಮ ಕೈಗೊಳ್ಳಬೇಕು ಎಂದು ಮುನಿಸ್ವಾಮಿ ಒತ್ತಾಯಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯನ್ನ ಅರೆಸ್ಟ್‌ ಮಾಡಲಿ – ಸಿಎಂ ಸ್ಫೋಟಕ ಹೇಳಿಕೆ

Basanagouda Patil Yatnal

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಏನೋ‌ ಮಾತನಾಡಿದರೆ ಏನೋ ಆಗುತ್ತೇನೆ ಎಂದು ಯತ್ನಾಳ್‌ ತಿಳಿದಿದ್ದಾರೆ. ಯತ್ನಾಳ್‌ ಭ್ರಮನಿಸರಾಗಿದ್ದು ಅವರ ಹೇಳಿಕೆಯನ್ನು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ. ಕೆಲವರು ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳ್‌ ಸೇರಿ ಅಂತವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಎಸ್‌ಟಿ ಸೋಮಶೇಖರ್ ರಾಜೀನಾಮೆ ನೀಡಬೇಕು ಎಂದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಡಾ ಆಯುಕ್ತರನ್ನು ಬಂಧಿಸಬೇಕು – ಕೇಂದ್ರ ಸಚಿವ ಹೆಚ್‌ಡಿಕೆ ಆಗ್ರಹ

ರಾಜ್ಯ ಸರ್ಕಾರ ವೋಟ್‌ ಬ್ಯಾಂಕ್‌ಗಾಗಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ವಿಧಾನ ಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಡಿಜಿ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ? ಗಣೇಶ ಹಬ್ಬಕ್ಕೆ ನೂರಾರು ನಿಯಮ ಹಾಕುತ್ತಾರೆ. ಟಿಪ್ಪು ಜಯಂತಿಗೆ ಯಾವುದೇ ನಿಯಮವಿಲ್ಲ. ಪ್ಯಾಲೆಸ್ಟೈನ್ ಜಿಂದಾಬಾದ್ ಎನ್ನುತ್ತಾರೆ. ಇಟಲಿಯ ಮೇಡಂ ಮನವೊಲಿಸಲು ಸಿದ್ದರಾಮಯ್ಯ ಯಾರ ಮೇಲೂ ಕ್ರಮ ಕೈಗೊಳ್ಳಲ್ಲ. ಎಲ್ಲದರಲ್ಲೂ ಓಲೈಕೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Share This Article