ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಪಲ್ಟಿ – ಎದೆಗೆ ಹೊಕ್ಕ ಕಬ್ಬಿಣದ ಪೈಪ್

Public TV
1 Min Read
Haveri Lorry Accident

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಹೂಲಹಳ್ಳಿ ಗ್ರಾಮದ 48 ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು 27 ವರ್ಷದ ಚಾಲಕ ಶಿವಾನಂದ ಬಡಗಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: BBK 11: ಐಶ್ವರ್ಯಾ, ರಂಜಿತ್‌ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್- ‘ಬಿಗ್‌’ ಮನೆಯಲ್ಲಿ ಹೊಸ ಪ್ರೇಮ ಪುರಾಣ

ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯು 48ನೇ ರಾಷ್ಟ್ರೀಯ ಹೆದ್ದಾರಿಯ ಬಳಿ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಪಲ್ಟಿಯಾಗಿದೆ. ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚಾಲಕನ ಎದೆಯೊಳಗೆ ಹೊಕ್ಕಿದೆ. ರಕ್ತ ಸೋರುತ್ತಿದ್ದರೂ ಚಾಲಕ ದಿಕ್ಕು ತೋಚದೇ ಕುಳಿತು ಬಿಟ್ಟಿದ್ದಾನೆ.

ರಾಷ್ಟ್ರೀಯ ಹೆದ್ದಾರಿಯ ಅಂಬ್ಯುಲೆನ್ಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಕಬ್ಬಿಣದ ಪೈಪ್‌ನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

Share This Article