ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

Public TV
2 Min Read
bobby deol 1

ಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ:Kantara Chapter 1: ರಿಷಬ್ ಶೆಟ್ಟಿ ತಂದೆ ಪಾತ್ರದಲ್ಲಿ ಮೋಹನ್‌ಲಾಲ್?

bobby deol

ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ ಖ್ಯಾತಿಯ ನಟ ಬಾಬಿ ಡಿಯೋಲ್ (Bobby Deol) ಕಾಣಿಸಿಕೊಳ್ಳಲಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆಯೇ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಯಾವ ಪಾತ್ರ ಮಾಡಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ವಿಜಯ್‌ಗೆ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.

vijay thalapathy

ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ದಿ ಗೋಟ್ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ.

Share This Article