ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ15 ಆರೋಪಿ ಕಾರ್ತಿಕ್‌ಗೆ ಜಾಮೀನು ಮಂಜೂರಾಗಿ 5 ದಿನ ಕಳೆದರೂ ಬಿಡುಗಡೆಯಾಗಿಲ್ಲ. ಯಾರಾದರೂ ಸಹಾಯಮಾಡಿ ಎಂದು ಕಾರ್ತಿಕ್ ತಂದೆ ಕಣ್ಣೀರು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಬಡವರು. ಹೇಗೆ ನಮ್ಮ ಮಗನನ್ನ ಕರೆತರೋದು ಎಂದು ಗೊತ್ತಾಗುತ್ತಿಲ್ಲ. ದುಡಿಯುವ ಮಗನನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲ. ಜಾಮೀನು ಸಿಕ್ಕಿ 5 ದಿನವಾದರೂ ಬಿಡುಗಡೆಯಾಗಲಿಲ್ಲ. ದಯವಿಟ್ಟು ನಮಗೆ ಯಾರಾದರೂ ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜಿಗಣಿಯಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕ್ ಪ್ರಜೆ ಬಂಧನ
ಶ್ಯೂರಿಟಿ ನೀಡಲು ನಮಗೆ ಶಕ್ತಿ ಇಲ್ಲ. ಆಕ್ಸಿಡೆಂಟ್ ಆಗಿ ಕಾಲು ಮುರಿದಿತ್ತು. ಆಗ ನನಗೆ ಎಂದು ನಾಲ್ಕೈದು ಲಕ್ಷ ಸಾಲ ಮಾಡಿದ್ದ. ಅದನ್ನ ತೀರಿಸಲು ಅವರ ಜೊತೆ ಹೋಗಿದ್ದಾನೆ. ನನ್ನ ಮಗ ಇಂತಹ ಕೆಲಸ ಮಾಡುವವನಲ್ಲ ಎಂದರು. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ | ರಾಜಕೀಯದಿಂದ ದೇವರನ್ನು ದೂರವಿಡಿ: ಸುಪ್ರೀಂ ಕೋರ್ಟ್
ದರ್ಶನ್ (Darshan) ಕುಟುಂಬದವರು ನಮಗೆ ಯಾರೂ ಗೊತ್ತಿಲ್ಲ. ದರ್ಶನ್ ಅಭಿಮಾನಿಗಳು ನಮ್ಮನ್ನ ಯಾರೂ ಸಂಪರ್ಕಿಸಿಲ್ಲ. ಯಾರಾದರೂ ನಮಗೆ ಸಹಾಯ ಮಾಡಿ ಎಂದು ಕಾರ್ತಿಕ್ ತಂದೆ ವೆಂಕಟೇಶ್ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4 ಕ್ಕೆ ಮುಂದೂಡಿಕೆ