‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಬಿಗ್ ಬಾಸ್ ಮನೆಗೆ (Bigg Boss Kannada 11) 3ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಬಿಗ್ ಬಾಸ್‌ನೇ ಟ್ರೋಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹೈಲೆಟ್ ಆಗಿದ್ದ ಧನರಾಜ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಅನ್ನೇ ಅನುಕರಣೆ ಮಾಡುವಂತ ಕಾಮಿಡಿ ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಧನರಾಜ್ ಹಂಚಿಕೊಂಡಿದ್ದರು. ಈ ವಿಡಿಯೋ ಭಾರೀ ಲೈಕ್ಸ್ ಮತ್ತು ವಿವ್ಸ್ ಗಿಟ್ಟಿಸಿಕೊಂಡಿತ್ತು. ಇದನ್ನೇ ದೊಡ್ಮನೆಗೆ ನಟ ಕಾಲಿಟ್ಟ ವೇಳೆ, ಸುದೀಪ್ ತೋರಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ರೋಲ್ ಮಾಡಿದ ನಟನಿಗೆ ಪ್ರಶ್ನಿಸಿ ಮಾತನಾಡಿದ ಸುದೀಪ್, ಆ ನಂತರ ಇದು ತಮಾಷೆಗಾಗಿ ಎಂದು ಧನರಾಜ್ ಕಾಲೆಳೆದಿದ್ದಾರೆ.
ನೀವು ಬಿಗ್ ಬಾಸ್‌ನ ಟ್ರೋಲ್ ಮಾಡಬೋದಾ ನಾನು ಚಮಕ್ ಕೊಡ್ತೀನಿ ಎಂದು ಸುದೀಪ್ ಸ್ಪರ್ಧಿಗೆ ತಮಾಷೆ ಮಾಡಿದ್ದಾರೆ. ಆ ನಂತರ ವಿಶೇಷ ಅಧಿಕಾರ ಪಡೆದಿದ್ದ ಭವ್ಯಾ ಮತ್ತು ಯಮುನಾ ನಿರ್ಧಾರ ಮೇರೆಗೆ ಧನರಾಜ್ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.
ಅಂದಹಾಗೆ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಐಶ್ವರ್ಯಾ ಸಿಂದೋಗಿ, ತ್ರಿವಿಕ್ರಮ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ.